ಮೈಸೂರು

ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವು : ತಲಕಾಡು ನಿಸರ್ಗಧಾಮದಲ್ಲಿ  ಘಟನೆ

ಮೈಸೂರು,ಮಾ,15:- ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ ಘಟನೆ  ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗಧಾಮದಲ್ಲಿ  ನಡೆದಿದೆ.

ಮೃತರನ್ನು ಹಾಸನದ ಜಿಲ್ಲೆಯ ಸಂಕೇನಹಳ್ಳಿ ಗ್ರಾಮದ ನಿವಾಸಿ ನಟೇಶ್ (39) ಎಂದು ಗುರುತಿಸಲಾಗಿದ್ದು,  ಒಟ್ಟು 48 ಜನರು ಶಬರಿಮಲೆಗೆಂದು ಪ್ರಯಾಣ ಹೊರಟಿದ್ದರು. ಸಾರ್ವಜನಿಕರಿಗೆ ಶಬರಿಮಲೆಗೆ  ಅನುಮತಿ ನಿರಾಕರಣೆ ಕಾರಣ ಹಿನ್ನಲೆ ಅಯ್ಯಪ್ಪ ಸ್ವಾಮಿ ಭಕ್ತರು ತಲಕಾಡಿಗೆ ಪ್ರವಾಸ ಬಂದಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ನಟೇಶ್ ಸಾವನ್ನಪ್ಪಿದ್ದಾರೆ.

ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: