ಮೈಸೂರು

ಮನೆಯ ಮುಂದೆ ನಿಲ್ಲಿಸಲಾದ ಹೀರೋ ಕರೀಷ್ಮಾ ದ್ವಿಚಕ್ರ ವಾಹನ ಕಳುವು

ಮೈಸೂರು,ಮಾ.16:- ಮೈಸೂರಿನಲ್ಲಿ ದ್ವಿಚಕ್ರವಾಹನಗಳನ್ನು ಕದಿಯುವ ಕಳ್ಳರು ಮತ್ತೆ ತಮ್ಮ ಕೈಚಳಕ ತೋರುತ್ತಿದ್ದು, ಮನೆಯ ಮುಂದೆ ನಿಲ್ಲಿಸಲಾದ ದ್ವಿಚಕ್ರವಾಹನ ಕಳುವಾದ ಬಗ್ಗೆ ವ್ಯಕ್ತಿಯೋರ್ವರು ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚಿಕ್ಕರಾಮ ಮಂದಿರ ಬೀದಿ ನಜರಬಾದ್ ನಲ್ಲಿ ವಾಸವಿರುವ ದಿನೇಶ್ ಎಂಬವರೇ ದೂರು ನೀಡಿದವರಾಗಿದ್ದು,   ಹೀರೋ ಕರೀಷ್ಮಾ ದ್ವಿಚಕ್ರ ವಾಹನ ನಂ-ಏಂ-55-ಐ-1143 ದ್ವಿಚಕ್ರ ವಾಹನವನ್ನು  29/01/2020 ರಂದು ಬೆಳಿಗ್ಗೆ  ಕೆಲಸಕ್ಕೆ ಕೊಂಡೊಯ್ದಿದ್ದು,  ನಂತರ ರಾತ್ರಿ ಕೆಲಸ ಮುಗಿಸಿ ಸುಮಾರು 10  ಗಂಟೆಗೆ ಮನೆಗೆ ಬಂದು   ನಮ್ಮ ಮನೆಯ ಮುಂಭಾಗ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮನೆಗೆ ಹೋಗಿ ಮಲಗಿದ್ದೆ. 30/01/2020 ಬೆಳಿಗ್ಗೆ ಸುಮಾರು  6  ಗಂಟೆಗೆ ಎದ್ದು ನೋಡಲಾಗಿ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ದ್ವಿಚಕ್ರ ವಾಹನ ಇರಲಿಲ್ಲ. ನಂತರ ನನ್ನ ದ್ವಿಚಕ್ರ ವಾಹನವನ್ನು ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: