ಮನರಂಜನೆ

ಕೊರೋನವೈರಸ್ : ವೈವಾಹಿಕ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದ ಭರತನಾಟ್ಯ ಕಲಾವಿದೆ, ನಟಿ ಉತ್ತರಾ ಉನ್ನಿ

ದೇಶ(ನವದೆಹಲಿ)ಮಾ.16:- ವೃತ್ತಿಪರ ಭರತನಾಟ್ಯ ಕಲಾವಿದೆ, ನಟಿ ಉತ್ತರಾ ಉನ್ನಿ ಅವರು ಕೊರೋನವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತಮ್ಮ ವೈವಾಹಿಕ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದ್ದಾರೆ. ಅವರು ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಘೋಷಿಸಿದ್ದಾರೆ.

“ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಇಡೀ ಪ್ರಪಂಚವು ತತ್ತರಿಸುತ್ತಿರುವುದರಿಂದ, ಪರಿಸ್ಥಿತಿಗಳು ಶಾಂತವಾಗುವವರೆಗೆ ನಮ್ಮ ವೈವಾಹಿಕ ಕಾರ್ಯಕ್ರಮವನ್ನು ಮುಂದೂಡಲು ನಾವು ನಿರ್ಧರಿಸಿದ್ದೇವೆ. ನಮ್ಮ ಮದುವೆಗೆ ಹಾಜರಾಗಲು ಆಗಲೇ ಟಿಕೆಟ್ ಕಾಯ್ದಿರಿಸಿದ್ದವರಿಗೆ ನಾವಿದನ್ನು ತಿಳಿಸಲು ವಿಷಾದಿಸುತ್ತೇವೆ.

ಉತ್ತರಾ ಉನ್ನಿ ಹಂಚಿಕೊಂಡಿರುವ ಇನ್ಸ್ಟಾ ಪೋಸ್ಟ್‌ಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಉತ್ತರ ಮತ್ತು ಅವರ ಭಾವಿ ಪತಿ ನಿತೇಶ್ ಎಸ್. ನಾಯರ್ ಅವರು ಮದುವೆಯ ದಿನಾಂಕದಂದು ದೇವಾಲಯದಲ್ಲಿ   ಶಾಸ್ತ್ರವನ್ನು ನೆರವೇರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: