ಸುದ್ದಿ ಸಂಕ್ಷಿಪ್ತ

ಮಾ.18 : ಬ್ರಹ್ಮರಥೋತ್ಸವ

ಚಾಮುಂಡೇಶ್ವರಿ ಅಮ್ಮನವರ ಸಮೂಹ ದೇವಸ್ಥಾನದಿಂದ ಚಾಮುಂಡೇಶ್ವರಿ ಬೆಟ್ಟದ ಮಹಾಬಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಮಾರ್ಚ್ 18ರಂದು ನಡೆಯಲಿದೆ.

ಮಾರ್ಚ್ 16ರಂದು ರಾತ್ರಿ ವೃಷಭ ವಾಹನ, 17ರಂದು ರಾತ್ರಿ ಕಳಶಾರೋಹಣ ನಂತರ ಗಜವಾಹನ, ಮಾರ್ಚ್ 18ರಂದು ಬೆಳಿಗ್ಗೆ 7.20ರಿಂದ 8.20ರೊಳಗೆ ಶುಭ ಮೇಷ ಲಗ್ನದಲ್ಲಿ ಯಾತ್ರಾದಾನ ನಂತರ ಬ್ರಹ್ಮರಥೋತ್ಸವ ಹಾಗೂ ಸಂಜೆ 6ಗಂಟೆಗೆ ಹಂಸವಾಹನ ನಡೆಯಲಿದೆ. ಮಾರ್ಚ್.19ರಂದು ರಾತ್ರಿ ಅಶ್ವಾರೋಹಣ, ಭೂತವಾಹನ, 20ರಂದು ಬೆಳಿಗ್ಗೆ ತೀರ್ಥ ಸ್ನಾನ, ಪಲ್ಲಕ್ಕಿ ಉತ್ಸವ ಹಾಗೂ ಧ್ವಜಾರೋಹಣ, 21ರಂದು ಸಂಜೆ 6ಗಂಟೆಗೆ ಕೈಲಾಸ ವಾಹನ, ಶಯನೋತ್ಸವ, 22ರಂದು ಬೆಳಿಗ್ಗೆ ಮಹಾಭಿಷೇಕ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

comments

Related Articles

error: