ಮೈಸೂರು

ವರದಕ್ಷಿಣೆ ತರುವಂತೆ ಪತಿ ಮನೆಯಿಂದ ಹಿಂಸೆ : ದೂರು

ಮೈಸೂರು,ಮಾ.17:- ವರದಕ್ಷಿಣೆ ರೂಪದಲ್ಲಿ ಬೈಕ್ ತೆಗೆಸಿಕೊಟ್ಟಿಲ್ಲವೆಂದು ಮಹಿಳೆಯೋರ್ವರನ್ನು ಆಕೆಯ ಪತಿ ರೈಲು ನಿಲ್ದಾಣದಲ್ಲೇ ಬಿಟ್ಟುಹೋದ ಘಟನೆ ನಡೆದಿದ್ದು, ಮಹಿಳಾ ಠಾಣೆಗೆ ಈ ಕುರಿತು ಮಹಿಳೆಯೋರ್ವರು ದೂರು ನೀಡಿದ್ದಾರೆ.

ನವೋಮಿ ಎಂಬವರೇ ದೂರು ನೀಡಿದವರಾಗಿದ್ದು, ಸಂದೀಶ್ ಅವರನ್ನು ಪರಸ್ಪರ ಪ್ರೀತಿಸಿ, ಹಿರಿಯರ ಒಪ್ಪಿಗೆಯೊಂದಿಗೆ  02.01.2017 ರಂದು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ನವೋಮಿ ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು,  ಸಂದೀಶ್ ನನ್ನು ಮದುವೆಯಾಗಿದ್ದು   ರೋಸಿ, ಇಂದಿರಾ,   ಪರಮಾನಂದಮ್,  ಪ್ರೀಸಿಲಾರವರಿಗೆ ಇಷ್ಟವಿಲ್ಲದ ಕಾರಣ  ಇವರು ವಿನಾ ಕಾರಣ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಬೇರೆ ಹುಡುಗಿಯನ್ನು ಮದುವೆಯಾಗಿದ್ದರೆ ಹೆಚ್ಚಿನ ವರದಕ್ಷಿಣೆ ಸಿಗುತ್ತಿತ್ತು ಎಂದು ಮನೆ ಬಿಟ್ಟು ತೊಲಗುವಂತೆ   ಬೈದು, ಹಲವಾರು ಬಾರಿ ತವರು ಮನೆಗೆ ಕಳುಹಿಸಿದ್ದರು. 29.07.2018 ರಂದು ಟ್ರೈನ್ನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಸಂದೀಶ್ ತವರು ಮನೆಯಿಂದ ಬೈಕ್ ತಂದು ಕೊಡುವಂತೆ ಹೇಳಿದ್ದು, ಬೈಕ್ ಕೊಳ್ಳಲು ಹಣ ಇಲ್ಲವೆಂದು ಹೇಳಿದಾಗ ಕೋಪಗೊಂಡು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು, ಹೋಗಿದ್ದ, ಪಲೀಸಿನರವರ ಸಹಾಯದಿಂದ ಮೈಸೂರಿಗೆ ಬಂದಿದ್ದು, 04.04.2019 ರಂದು   ರೂಮಿಗೆ ಸೊಳ್ಳೆಗೆ ಹೊಡೆಯುವ ಹಿಟ್ ನ್ನು  ರೂಮಿಗೆ ಸಿಂಪಡಿಸಿ ಬಾಗಿಲು ಹಾಕಿಕೊಂಡು ಹೋಗಿದ್ದು,  ಉಸಿರಾಟದ ತೊಂದರೆಯಾಗಿ ಚಿಕಿತ್ಸೆ ಪಡೆದಿದ್ದಾರೆ. ಮಗುವಾದಾಗಲೂ ನೋಡಲು ಬರದೇ ನಂತರದಲ್ಲಿ   ಮಗುವಿಗೆ ಚಿನ್ನ ಹಾಕಿ ಕಳುಹಿಸುವಂತೆ ಹೇಳಿದ್ದು, ತಂದೆ ನಮ್ಮ ಬಳಿ ಹಣವಿಲ್ಲ ಎಂದಾಗ ಕೆಟ್ಟದಾಗಿ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆಂದು  ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: