ಮೈಸೂರು

ನಂಜನಗೂಡು ತಾಲೂಕಿನ ಕೋಣನೂರಿನಲ್ಲಿ ಕರಡಿ ಕಾಟ

ಮೈಸೂರು,ಮಾ.17:-   ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಕರಡಿ ಕಾಟ ಹೆಚ್ಚುತ್ತಿದ್ದು, ಜನತೆ ಆತಂಕಕೀಡಾಗಿದ್ದಾರೆ.

ನಂಜನಗೂಡು ತಾಲೂಕಿನ ಕೋಣನೂರು ಗ್ರಾಮವನ್ನು ಕರಡಿ ಪ್ರವೇಶಿಸಿದ್ದು, ಕೋಣನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಅಡಗಿದೆ ಎನ್ನಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕರಡಿಗಾಗಿ ಹುಡುಕಾಟ ನಡೆಸಿದ್ದು, ಕೆಲ ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ಚಿರತೆ ಪ್ರವೇಶಿಸಿತ್ತು. ಕಾಡು ಪ್ರಾಣಿಗಳ ಕಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಕಾಡು ಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: