ದೇಶಪ್ರಮುಖ ಸುದ್ದಿ

ಅತ್ಯಾಚಾರ ಆರೋಪಿ ಸಮಾಜವಾದಿ ಪಕ್ಷದ ನಾಯಕನ ಸೆರೆ : 14 ದಿನ ನ್ಯಾಯಾಂಗ ಬಂಧನ

ಲಖ್ನೋ : ಅತ್ಯಾಚಾರ ಆರೋಪ ಹೊತ್ತ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಇಂದು ಬೆಳಗ್ಗೆ ಲಖ್ನೋದಲ್ಲಿ ಬಂಧಿಸಿದ್ದಾರೆ.

ಪ್ರಜಾಪತಿ ಬಂಧವನ್ನು ಡಿಜಿಪಿ ಜಾವೇದ್‍ ಅಹಮದ್ ಅವರು ಧೃಢಪಡಿಸಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆ ನಡೆಸಿದ ವೇಳೆ ತಾನು ಫೆಬ್ರವರಿ 27 ರಿಂದಲೂ ಪಶ್ಚಿಮ ಬಂಗಳ ಮತ್ತು ದಕ್ಷಿಣ ರಾಜ್ಯಗಳಲ್ಲಿ ಇದ್ದದ್ದಾಗಿ ಪ್ರಜಾಪತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಬಂಧಿಸಿದ ನಂತರ ಪ್ರಜಾಪತಿಯನ್ನು ಪೋಸ್ಕೊ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದಲ್ಲದೆ ಪ್ರಜಾಪತಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಮೂವರು ಸಹವರ್ತಿಗಳನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣ ಬೇಧಿಸುವಲ್ಲಿ ಮಹತ್ವದ ಸುಳಿವು ದೊರೆತಿದೆ ಎಂದು ಮೂಲಗಳು ತಿಳಿಸಿವೆ.

(ಎನ್‍.ಬಿ.ಎನ್)

Leave a Reply

comments

Related Articles

error: