
ಮೈಸೂರು
ಸರ್ವೇ ನಡೆಸಿ ಪಕ್ಷಿಗಳನ್ನು ಗುರುತಿಸಿದ ಮೈಸೂರು ಜಿಲ್ಲಾಡಳಿತ
ಮೈಸೂರು,ಮಾ.17:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ವೈರಸ್ ಜತೆಗೆ ಹಕ್ಕಿ ಜ್ವರ ಭೀತಿ ಎದುರಾಗಿದ್ದು, ಮೈಸೂರಿನಲ್ಲಿ ಹಕ್ಕಿ ಜ್ವರ ಇರುವುದು ಖಾತ್ರಿ ಹಿನ್ನೆಲೆ, ಮೈಸೂರು ಜಿಲ್ಲಾಡಳಿತ ಪಕ್ಷಿ ಸರ್ವೇ ನಡೆಸಿ ಪಕ್ಷಿಗಳನ್ನು ಗುರುತಿಸಿದ್ದಾರೆ.
ಜಿಲ್ಲಾಡಳಿತದಿಂದ ಪಕ್ಷಿ ಸರ್ವೇ ಕಾರ್ಯ ಮುಕ್ತಾಯವಾಗಿದ್ದು ಅಧಿಕಾರಿಗಳು ಒಟ್ಟು 6436 ಪಕ್ಷಿಗಳನ್ನು ಗುರುತಿಸಿದ್ದಾರೆ. ಮೇಟಗಳ್ಳಿ ನಿವಾಸಿ ರಾಮಣ್ಣ ಎಂಬುವವರ ಮನೆಯಲ್ಲಿ 10 ಕೋಳಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದವು. ಈ ಸಂಬಂಧ ಮೇಟಗಳ್ಳಿ ರಾಮಣ್ಣ ನಿವಾಸದ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.
ಹಕ್ಕಿಜ್ವರದ ಇರುವುದು ಖಾತ್ರಿ ಹಿನ್ನೆಲೆ, ಮೈಸೂರು ಜಿಲ್ಲಾಡಳಿತ ಪಕ್ಷಿ ಸರ್ವೇ ನಡೆಸಿ ಪಕ್ಷಿಗಳನ್ನ ಗುರುತಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್. ಸರ್ವೇ ಮಾಹಿತಿ ಹಂಚಿಕೊಂಡಿದ್ದಾರೆ.
ಸೂಕ್ಷ್ಮ ವಲಯದ ಮನೆಗಳು 17820., ಪಕ್ಷಿ ಇರುವ ಮನೆಗಳು 144., ನೈಸರ್ಗಿಕ ಪಕ್ಷಿಗಳು 1252., ಔದ್ಯಮಿಕ ಪಕ್ಷಿಗಳು 5100., ಸಾಕು ಪಕ್ಷಿಗಳು 254., ಕ್ವೈಲ್ಸ್ 12.,ಟರ್ಕಿ 18 ಒಟ್ಟು 6,436 ಪಕ್ಷಿಗಳು.
ಗುರುತಿಸಿದ ಅಷ್ಟೂ ಪಕ್ಷಿಗಳನ್ನೂ ನಾಶಪಡಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. (ಕೆ.ಎಸ್,ಎಸ್.ಎಚ್)