ಮೈಸೂರು

ಪಕ್ಷಿಗಳಿಗೆ ನೀರುಣಿಸುವ ಮೂಲಕ ಹುಟ್ಟುಹಬ್ಬ ಆಚರಣೆ

ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ಅವರ 39 ನೇ ಹುಟ್ಟುಹಬ್ಬದ ಅಂಗವಾಗಿ ವೇದಿಕೆಯ ಸದಸ್ಯರು ಮರದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಅಳವಡಿಸಿ ಅದರಲ್ಲಿ ಪಕ್ಷಿಗಳಿಗೆ ನೀರು‌ ಹಾಗೂ ಆಹಾರ ಧಾನ್ಯಗಳನ್ನು ಹಾಕುವ ಮೂಲಕ ವಿಭಿನ್ನವಾಗಿ ಆಚರಿಸಿದರು.

ಮೈಸೂರಿನ ಚಾಮರಾಜ ಡಬಲ್ ರೋಡ್ ನಲ್ಲಿರುವ ಮರಗಳಿಗೆ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಆಹಾರ ಧಾನ್ಯ ಹಾಗೂ ನೀರು ಹಾಕಿ ಸಣ್ಣ ಪುಟ್ಟ ಪ್ರಾಣಿ ಸಂಕುಲ ಉಳಿಸಿ ಎಂದು ಬಿತ್ತಿಪತ್ರ ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಈ ಸಂದರ್ಭ  ಬಿಜೆಪಿ ನಗರಾಧ್ಯಕ್ಷ ಮಂಜುನಾಥ್, ಕಡಕೊಳ ಜಗದೀಶ್, ಜೋಗಿಮಂಜು, ವಿಕ್ರಮ್, ಕಶ್ಯಪ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: