ಮೈಸೂರು

ತಮಿಳುನಾಡು ಹ್ಯಾಂಡ್ ಲೂಮ್ ವೀವರ್ಸ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ವಸ್ತು ಪ್ರದರ್ಶನ

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆಯಲ್ಲಿ ತಮಿಳುನಾಡು ಹ್ಯಾಂಡ್ ಲೂಮ್ ವೀವರ್ಸ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮವನ್ನು ಕೋ-ಆಪ್ಟೆಕ್ಸ್ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಜಿ.ಎಚ್.ಕುಲಕರ್ಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೈಮಗ್ಗದ ವಸ್ತುಗಳನ್ನು, ರೇಷ್ಮೆ, ಕಾಂಚಿಪುರಂ, ಕೊಯಮತ್ತೂರು ಸೀರೆಗಳನ್ನು ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದೆ. ತಮಿಳ್ನಾಡಿನ ಹೆಸರಾಂತ ಕೋ-ಆಪ್ಟೆಕ್ಸ್ ನಲ್ಲಿ ಸಾವಿರಾರು ಮಂದಿ ಕಾರ್ಯನಿರ್ವಹಿಸುತ್ತಾರೆ. ದೇಶದಾದ್ಯಂತ 2ಲಕ್ಷ ವೀವರ್ಸ್ ನ್ನು ಹೊಂದಿದ್ದು, 200ಶೋರೂಂಗಳಿವೆ. ಸಾರ್ವಜನಿಕರು ಈ ಪ್ರದರ್ಶನವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ಎರಡು ಕೊಂಡರೆ ಒಂದು ಉಚಿತವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇಲ್ಸ್ ಮ್ಯಾನೇಜರ್ ಎಂ.ಎಸ್.ಶ್ರೀನಿವಾಸ್, ಸುಬ್ರಹ್ಮಣ್ಯ ಎಸ್.ಎಂ, ಶಿವಶಕ್ತಿ, ಸೆಲ್ವಿರಾಜ್, ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರದರ್ಶನದಲ್ಲಿ ರೇಷ್ಮೆ ಸೀರೆ, ಹತ್ತಿಸೀರೆ, ಕೋರಾ ಕಾಟನ್ ಸೀರೆ, ಮದುವೆ ಹುಡುಗರ ಸೆಟ್ಟುಗಳು, ಹೊದಿಕೆಗಳು, ದಿಂಬಿನ ಕವರುಗಳು, ಲುಂಗಿಗಳು, ಜಮಖಾನ, ಟವೆಲ್ ಗಳು, ಕುರ್ತೀಸ್, ಚೂಡಿದಾರದ ಸಾಮಾಗ್ರಿ, ನೈಟಿ, ಪೆಟಿಕೋಟ್ , ಪುರುಷರ ಸಿದ್ಧಪಡಿಸಿದ ಶರ್ಟ್ ಗಳು ಮಾರ್ಚ್ 21ರವರೆಗೆ ಲಭ್ಯವಿದೆ.

Leave a Reply

comments

Related Articles

error: