ಪ್ರಮುಖ ಸುದ್ದಿ

ಕೊರೋನಾ ವಿರುದ್ಧ ಮುಂದುವರಿದ ಜಾಗೃತಿ ಅಭಿಯಾನ

ರಾಜ್ಯ( ಮಡಿಕೇರಿ) ಮಾ.19 :- ಕೊರೊನಾ ವೈರಸ್ ಬಗ್ಗೆ ಜಾಗೃತಿ ಚಟುವಟಿಕೆಗಳನ್ನು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗಡಿ ಪ್ರದೇಶಗಳಲ್ಲಿ, ಗಿರಿಜನ ಹಾಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಆಟೋ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಮತ್ತು ಮನೆ ಮನೆ ಭೇಟಿಯಲ್ಲಿ ಭಿತ್ತಿಪತ್ರ, ಕರಪತ್ರ ಹಂಚುವುದರ ಮೂಲಕ ಮಂಗಳವಾರ ಜಾಗೃತಿ ಮೂಡಿಸಿದರು.
ಗಡಿ ಪ್ರದೇಶಗಳಾದ ವಿರಾಜಪೇಟೆ ತಾಲ್ಲೂಕಿನ ಗಡಿ ಪ್ರದೇಶಗಳಾದ ಕುಟ್ಟ, ಮಾಕುಟ್ಟ, ತಿತಿಮತಿ, ಮಾಲ್ದಾರೆ, ವಿರಾಜಪೇಟೆ, ಗೋಣಿಕೊಪ್ಪ, ಮಡಿಕೇರಿ ತಾಲ್ಲೂಕಿನ ಗಡಿ ಪ್ರದೇಶಗಳಾದ ಸಂಪಾಜೆ, ಭಾಗಮಂಡಲ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ಮತ್ತಿತರ ಎಲ್ಲಾ ಕಡೆಗಳಲ್ಲಿ ಅರಿವು ಕಾರ್ಯಕ್ರಮ ಜರುಗಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: