ಮೈಸೂರು

ಗಮನ ಸೆಳೆಯಲಿದೆ ವಸ್ತು ಪ್ರದರ್ಶನ

ದಸರಾ ಉತ್ಸವದಲ್ಲಿ ವಸ್ತು ಪ್ರದರ್ಶನವು ಅತ್ಯಂತ ಪ್ರಮುಖ ಆಕರ್ಷಣೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಳ್ಳಲಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಸ್ತು ಪ್ರದರ್ಶನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್ ಮಾತನಾಡಿ ಈ ಬಾರಿ ವಸ್ತು ಪ್ರದರ್ಶನವನ್ನು ಭರ್ಜರಿಯಾಗಿ ನಡೆಸಲು ನಿರ್ಧರಿಸಲಾಗಿದ್ದು, 143 ಮಳಿಗೆಗಳು ತೆರೆದುಕೊಳ್ಳಲಿವೆ. ಫಣ್ ವರ್ಲ್ಡ್ &ರೆಸಾರ್ಟ್ ನಡಿ ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ಆಹಾರ ಮಳಿಗೆಗಳು, ಮೋನೋ ರೈಲುಗಳು ಇರಲಿವೆ ಎಂದರು.

ಸರ್ಕಾರದ  ವತಿಯಿಂದ ಸುಮಾರು 39 ಮಳಿಗೆಗಳು, ಜಿಲ್ಲಾಪಂಚಾಯತ್ ವತಿಯಿಂದ ಸುಮಾರು 30ಮಳಿಗೆಗಳನ್ನು ತೆರೆಯಲಾಗುತ್ತಿದ್ದು ಸಿದ್ಧತೆ ನಡೆದಿವೆ.

ವಸ್ತು ಪ್ರದರ್ಶನವು ಅಕ್ಟೋಬರ್ 1ರಿಂದ ಆರಂಭಗೊಂಡು ಡಿಸೆಂಬರ್ 26ಕ್ಕೆ ಮುಕ್ತಾಯಗೊಳ್ಳಲಿದೆ.  ಇಲ್ಲಿ ಭೇಟಿ ನೀಡುವವರಿಗೆ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿದ್ದು, ಈ ಬಾರಿ ಮಹಾತ್ಮಾಗಾಂಧಿ ರಸ್ತೆಯ ಪ್ರವೇಶದ್ವಾರದಲ್ಲಿ 500ಕಾರುಗಳು, 800ದ್ವಿಚಕ್ರವಾಹನಗಳು ಹಾಗೂ 30ಬಸ್ ಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಕಳೆದ ಬಾರಿ ಜಗತ್ತಿನ ಏಳು ಅದ್ಭುತಗಳು ಪ್ರಮುಖ ಆಕರ್ಷಣೆಯಾಗಿತ್ತು ಆದರೆ ಈ ಬಾರಿ ಫನ್ ವರ್ಲ್ಡ್ & ರೆಸಾರ್ಟ್ಸ್ ಅಮರನಾಥ ಯಾತ್ರಾ ಅನುಭವ ನೀಡಲು ಮುಂದಾಗಿದೆ ಎಂದು ತಿಳಿಸಿದರು.

Leave a Reply

comments

Tags

Related Articles

error: