ಕರ್ನಾಟಕಪ್ರಮುಖ ಸುದ್ದಿ

ಲಂಡನ್ ನಲ್ಲಿರುವ ಮಗಳನ್ನು ಕರೆತರುವ ವ್ಯವಸ್ಥೆ ಮಾಡಿ: ಜಯಮಾಲಾ ಮನವಿ

ಬೆಂಗಳೂರು,ಮಾ.19-ಲಂಡನ್ ನಲ್ಲಿರುವ ನನ್ನ ಮಗಳನ್ನು ಕರೆತರುವ ವ್ಯವಸ್ಥೆ ಮಾಡಿ ಎಂದು ನಟಿ, ಮಾಜಿ ಸಚಿವೆ ಜಯಮಾಲಾ ಮನವಿ ಮಾಡಿಕೊಂಡಿದ್ದಾರೆ.

ಇಂದು ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಅವರು, ನನ್ನ ಮಗಳು ಲಂಡನ್‌ನಲ್ಲಿ ಸಿಲುಕಿಕೊಂಡಿದ್ದಾಳೆ, ಅವಳನ್ನು ಭಾರತಕ್ಕೆ ಕರೆ ತರಲು ಸಹಾಯ ಮಾಡಿರಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

ನನ್ನ ಮಗಳು ಲಂಡನ್‌ನಲ್ಲಿ ಇದ್ದಾಳೆ. ಅಲ್ಲಿಂದ ಭಾರತಕ್ಕೆ ಬರಲು ವಿಮಾನಗಳಿಲ್ಲ. ಆಕೆಯ ಜೊತೆ ಇನ್ನೂ ಹಲವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆ ತರುವ ವ್ಯವಸ್ಥೆ ಆಗಬೇಕಿದೆ ಎಂದರು.

ನಿನ್ನೆಯಷ್ಟೇ ಸಚಿವ ಆನಂದ್ ಸಿಂಗ್ ಅವರು ತಮ್ಮ ಪುತ್ರಿ ಇಟಲಿಯಲ್ಲಿ ಸಿಲುಕಿದ್ದಾಳೆಂದು ಹೇಳಿ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಜಯಮಾಲಾ ತಮ್ಮ ಮಗಳು ಲಂಡನ್ ನಲ್ಲಿರುವ ವಿಚಾರವನ್ನು ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಈವರೆಗೆ 15 ಮಂದಿಗೆ ಸೋಂಕು ತಗುಲಿದೆ. ವಿದೇಶದಲ್ಲಿ ಸಿಲುಕಿರುವ ಹಲವು ಭಾರತೀಯರು ಸ್ವದೇಶಕ್ಕೆ ಮರಳಲಾಗದೆ ಒದ್ದಾಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: