ಕರ್ನಾಟಕಪ್ರಮುಖ ಸುದ್ದಿ

ರೈತರ ಸಾಲ ಮನ್ನಾ ಇಲ್ಲ : ಬಜೆಟ್ ಮುಖ್ಯಾಂಶಗಳು

 1. ಅರಣ್ಯ ಇಲಾಖೆಗೆ ೧೭೩೨ ಕೋಟಿ ರೂ ಮೀಸಲು
 2. ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ ೪೦೭, ಆನೆಗಳು ೬೦೭೨
 3. ಇಮಾಮ್ಗಳ ಗೌರವಧನ ಹೆಚ್ಚಳ- 3100 ರೂಪಾಯಿಯಿಂದ 4 ಸಾವಿರಕ್ಕೆ ಹೆಚ್ಚಳ
 4. ಪ್ರಾಥಮಿಕ & ಪ್ರೌಡ ಶಿಕ್ಷಣ ಇಲಾಖೆಗೆ ೧೮೨೬೬ ಕೋಟಿ ರೂ ಮೀಸಲು
 5. ಎರಡು ಹಂತಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ ೧೦ ಸಾವಿರ, ೧೬೨೬ ಪ್ರೌಢ ಶಾಲಾ ಶಿಕ್ಷಕರು, ೧೧೯೧ ಪಿಯು ಉಪನ್ಯಾಸಕರ ನೇಮಕ
 6. ಅಹಿಂದ ವರ್ಗಕ್ಕೆ 12269 ಕೋಟಿ ರೂಪಾಯಿ
 7. ರೈತರ ಸಾಲ ಮನ್ನಾ ಇಲ್ಲ
 8. ನಗರದಲ್ಲಿನ 198 ನಮ್ಮ ಕ್ಯಾಂಟಿನ್ ಯೋಜನೆ ಜಾರಿ
 9. ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ
 10. ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ವರೆಗೆ  ಸಾಲ ಸೌಲಭ್ಯ

 

 1. ಶೇ.3 ರ ಬಡ್ಡಿದರದಲ್ಲಿ 10 ಲಕ್ಷ ದವರೆಗೆ ಕೃಷಿ ಸಾಲ
 2. 21 ಜಿಲ್ಲೆಗಳಲ್ಲಿ 19 ಹೊಸ ತಾಲೂಕುಗಳ ಘೋಷಣೆ
 3. 25 ಲಕ್ಷ ರೈತರಿಗೆ 13,500 ಕೋಟಿ ರೂ. ಸಾಲ ನೀಡುವ ಗುರಿ
 4. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ 145 ಚಿಕತ್ಸಾ ಘಟಕಗಳು
 5. ಅನ್ನಭಾಗ್ಯದಡಿ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯಂದ 7 ಕೆಜಿಗೆ ಏರಿಕೆ
 6. ಒಂದನೇ ತರಗತಿಯಿಂದಲೇ ಆಂಗ್ಲ ಪಠ್ಯ ಬೋಧನೆ
 7. ರಾಜ್ಯದಲ್ಲಿ ಐದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಆರಂಭ
 8. ಕ್ಷಿರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಹಾಲು ವಿತರಣೆ
 9. ದಾವಣಗೆರೆ, ಕೋಲಾರ, ರಾಮನಗರದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ
 10. 8-10 ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ, ಸಮವಸ್ತ್ರ ವಿತರಣೆ

 

 1. ರಾಜ್ಯದಲ್ಲಿ 176 ಸಂಯೋಜಿತ ಕಾಲೇಜುಗಳ ಸ್ಥಾಪನೆ
 2. ಖಾಸಗಿ ಸಂಸ್ಥೆಹಗಳಲ್ಲಿ ಎಸ್‌ಸಿ-ಎಸ್‌ಟಿ ಕಾರ್ಮಿಕರಿಗೆ ಉದ್ಯೋಗ
 3. ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ 20 ಕೋಟಿ ರೂ. ಮೀಸಲು
 4. ಕರಾವಳಿ ಭಾಗದಲ್ಲಿ ಪಶ್ಚಿಮ ವಾಹಿನಿ ಯೋಜನೆ ಜಾರಿ
 5. ಗ್ರಾಮೀಣ ಪ್ರದೇಶದಲ್ಲಿ 2500 ಶುದ್ಧ ನೀರಿನ ಘಟಕ ಸ್ಥಾಪನೆ
 6. ಅಮ್ಮಾ ಕ್ಯಾಂಟಿನ್ ಮಾದರಿಯಲ್ಲಿ ನಮ್ಮ ಕ್ಯಾಂಟಿನ್
 7. 5 ರೂ.ಗಳಿಗೆ ಬೆಳಗಿನ ತಿಂಡಿ, 10 ರೂ,ಗಳಿಗೆ ಊಟ ಸೌಲಭ್ಯ
 8. ದುಬಾರಿ ದ್ವಿಚಕ್ರ ವಾಹನ ಕೊಳ್ಳುವವರಿಗೆ ಬರೆ
 9. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂ.
 10. ಬಿಯರ್ ಲಿಕ್ಕರ್, ಫೆನ್ನಿ, ವೈನ್, ಮೌಲ್ಯ ವರ್ಧಿತ ತೆರಿಗೆ ರದ್ದು

 

 1. ಮದ್ಯದ ಮೇಲೆ ಹೆಚ್ಚುವರಿಯಾಗಿ ಅಬಕಾರಿ ಸುಂಕ
 2. ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣ
 3. ಬೆಂಗಳೂರು ಒನ್ ಮಾದರಿಯಲ್ಲಿ ಕರ್ನಾಟಕ ಓನ್ ಯೋಜನೆ
 4. ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಕೇಂದ್ರ ಆರಂಭ
 5. ಹೈ-ಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ ರೂಪಾಯಿ
 6. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸವಿರುಚಿ ಸಂಚಾರಿ ಕ್ಯಾಂಟಿನ್
 7. ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ
 8. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಉಚಿತ ವೈಫೈ
 9. ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ
 10. ನೀರಿನ ಟ್ಯಾಂಕರ್ ಖರೀದಿಸುವ ರೈತರಿಗೆ 50 ಸಾವಿರ ಸಹಾಯ ಧನ

 

 1. ಸರಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ಆಯೋಗ ರಚನೆ
 2. ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಶೇ.90 ರಷ್ಟು ಸಬ್ಸಿಡಿ
 3. ಕಾರವಾರ, ಮಡಿಕೇರಿ, ಚಿಕ್ಮೂಕಮಗಳೂರು ಜಿಲ್ಲೆಗಳಲ್ಲಿ ವಿಮಾನ ಇಳಿದಾಣ ನಿರ್ಮಾಣ
 4. 10 ಸಾವಿರ ಉತ್ಕ್ರಷ್ಠ ಟಗರು ಉತ್ಪಾದನಾ ಘಟಕ
 5. ರಾಜ್ಯದ ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರೂ ಸಹಾಯ ಧನ ನೆರವು
 6. ಬಿಬಿಎಂಪಿ ವ್ಯಾಪ್ತಿಯಲ್ಲಿ 43 ಪ್ರಮುಖ ರಸ್ತೆಗಳ ಅಭಿವೃದ್ಧಿ
 7. ಟೆಂಡರ್ ಶ್ಯೂರ್ ಮಾದರಿಯಲ್ಲಿ 25 ಕಿ.ಮೀ ರಸ್ತೆ ಅಭಿವೃದ್ಧಿ
 8. 690 ಕೋಟಿ ವೆಚ್ಚದಲ್ಲಿ ರಸ್ತೆಗಳು ಮೇಲ್ದರ್ಜೆಗೆ
 9. 250 ಕೋಟಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳ ನಿರ್ಮಾಣ
 10. 2 ಸ್ಟ್ರೋಕ್ ಅಟೋಗಳ ರದ್ದತಿಗೆ ಕ್ರಮ

 

 1. ಎಲ್‌ಪಿಜಿ ಅಟೋ ರಿಕ್ಷಾಗಳಿಗೆ 30 ಸಾವಿರ ರೂ.ಸಹಾಯ ಧನ
 2. ಅಪಘಾತದಲ್ಲಿ ಹಸು ಎತ್ತು ಸಾವನ್ನಪ್ಪಿದರೆ 10 ಸಾವಿರ ರೂ.ಪರಿಹಾರ
 3. 10 ಸಾವಿರ ಅಟೋಗಳಿಗೆ ಇ-ಸಹಾಯ ಧನ
 4. ರಾಜ್ಯದ 16 ಪ್ರರ್ವಾಸಿ ಕೇಂದ್ರಗಳು ವಿಶ್ವದರ್ಜೆಗೆ ಅಭಿವೃದ್ಧಿ
 5. ಕರ್ನಾಟಕ ಶಾಲಾ ಶಿಕ್ಷಣ ನೀತಿ ಜಾರಿಗೆ ನಿರ್ಧಾರ
 6. ಶ್ರವಣಬೆಳಗೊಳ ಮಹಾಮಸ್ತಾಭಿಷೇಕಕ್ಕೆ 175 ಕೋಟಿ ಅನುದಾನ
 7. ಸಂಚಾರ ದಟ್ಟಣೆಯುಳ್ಳು 12 ಕಾರಿಡಾರ್ ಅಭಿವೃದ್ಧಿ

(ಎಸ್‍.ಎನ್‍/ಎನ್‍.ಬಿ.ಎನ್)

Leave a Reply

comments

Related Articles

error: