ಮೈಸೂರು

ಪತಿಯನ್ನು ಹುಡುಕಿಕೊಡುವಂತೆ ಪತ್ನಿಯ ಮೊರೆ

ಪತಿ ನನ್ನನ್ನು ಬಿಟ್ಟು ಬಂದಿದ್ದಾನೆ ಅವನನ್ನು ಹುಡುಕಿಕೊಡಿ ಎಂದು ಬೆಂಗಳೂರಿನ ಮಲ್ಲೇಶ್ವರಂ ಮಹಿಳೆಯೋರ್ವರು ಪೊಲೀಸರ ಮೊರೆ ಹೋದ ಘಟನೆ ಮೈಸೂರಿನ ನಡೆದಿದೆ.

ನನಗೆ ಹೆಂಡತಿ ಬೇಡವೆಂದು ಜಗಳವಾಡಿಕೊಂಡು ಮನೆ ಬಿಟ್ಟು ಬಂದ ಪತಿರಾಯ ಬುಧವಾರ ಮೈಸೂರಿನಲ್ಲಿ ಪ್ರತ್ಯಕ್ಷವಾಗಿದ್ದಾನೆ. ನಾಲ್ಕು ತಿಂಗಳಿಂದ ಕಾಣೆಯಾದ ಗಂಡನನ್ನು ಹುಡುಕಿಕೊಂಡು ಬೆಂಗಳೂರಿನ ಮಲ್ಲೇಶ್ವರಂನಿಂದ ಪತ್ನಿ ಮೈಸೂರಿಗೆ ಆಗಮಿಸಿದ್ದಾರೆ. ಈ ವೇಳೆ ಪತಿ ವಿನೋದ್ ಅರಸ್ ಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯ ಪುಟ್ಟಸ್ವಾಮಿ ಎಂಬುವವರ ನಿವಾಸಿದಲ್ಲಿ‌ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ‌ ರಾಜ್ಯದ ಮೂಲೆ-ಮೂಲೆಯಲ್ಲಿ ಹುಡುಕಿದ ನವ್ಯಳಿಗೆ ವಿನೋದ್ ಸಿಕ್ಕಿರಲಿಲ್ಲ. ಈ ವೇಳೆ ಲಕ್ಷ್ಮಿಪುರಂ ಠಾಣಾ ಪೊಲೀಸರು ಪತಿಯನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಆದರೆ, ಪತಿ ಠಾಣೆಯಿಂದ ನಾಪತ್ತೆಯಾಗಿದ್ದಾರೆ. ಆದರೆ ಪತ್ನಿ ನವ್ಯ ಮಾತ್ರ ನನಗೆ ನನ್ನ ಗಂಡ ಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಸದ್ಯ ಲಕ್ಷ್ಮಿಪುರಂ ಠಾಣೆಗೆ ಕೆ.ಆರ್.ವಿಭಾಗದ ಎಸಿಪಿ ಮಲ್ಲಿಕ್ ಠಾಣೆಗೆ ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: