ಮೈಸೂರು

ಕೊರೊನಾ ರೋಗಾಣು (COVID-19) ಹರಡುವಿಕೆಯ ಹಿನ್ನೆಲೆಯಲ್ಲಿ ಕೆಲವು ರೈಲುಗಳು ರದ್ದು

ಮೈಸೂರು,ಮಾ.20:-  ಕೊರೊನಾ ರೋಗಾಣು (COVID-19) ಹರಡುವಿಕೆಯ ಹಿನ್ನೆಲೆಯಲ್ಲಿ ಕಡಿಮೆ ಪ್ರೋತ್ಸಾಹದ ಕಾರಣ ಹಲವು  ರೈಲುಗಳ ಸೇವೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ರದ್ದುಗೊಳಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ರೈಲು ಗಾಡಿ ಸಂಖ್ಯೆ 16023/16024 ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ,  ರೈಲು ಗಾಡಿ ಸಂಖ್ಯೆ 16557/16558 ಮೈಸೂರು-ಕೆ.ಎಸ್.ಆರ್. ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ ,ರೈಲು ಗಾಡಿ ಸಂಖ್ಯೆ 17325 ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಗಾಡಿ 21.03.2020 ರಿಂದ 01.04.2020 ರವರೆಗೆ, ರೈಲು ಗಾಡಿ ಸಂಖ್ಯೆ 17326 ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ, ರೈಲು ಗಾಡಿ ಸಂಖ್ಯೆ 11065 ಮೈಸೂರಿನಿಂದ ರೇಣಿಗುಂಟ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ಮತ್ತು 27.03.2020 ರವರೆಗೆ, ರೈಲು ಗಾಡಿ ಸಂಖ್ಯೆ 11066 ರೇಣಿಗುಂಟದಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 21.03.2020 ಮತ್ತು 28.03.2020 ರವರೆಗೆ, ರೈಲು ಗಾಡಿ ಸಂಖ್ಯೆ 16217 ಮೈಸೂರಿನಿಂದ ಸಾಯಿನಗರ ಶಿರಡಿ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 23.03.2020 ಮತ್ತು 30.03.2020 ರವರೆಗೆ, ರೈಲು ಗಾಡಿ ಸಂಖ್ಯೆ 16218 ಸಾಯಿನಗರ ಶಿರಡಿಯಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 24.03.2020 ಮತ್ತು 31.03.2020 ರವರೆಗೆ, ರೈಲು ಗಾಡಿ ಸಂಖ್ಯೆ 12079/12080 ಹುಬ್ಬಳ್ಳಿ-ಕೆ.ಎಸ್.ಆರ್. ಬೆಂಗಳೂರು- ಹುಬ್ಬಳ್ಳಿ, ಜನಶತಾಬ್ದಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ ,ರೈಲು ಗಾಡಿ ಸಂಖ್ಯೆ 06539/06540 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020, 24.03.2020, 25.03.2020, 26.03.2020, 27.03.2020 ಮತ್ತು 31.03.2020 ರವರೆಗೆ, ರೈಲು ಗಾಡಿ ಸಂಖ್ಯೆ 16541 ಯಶವಂತಪುರದಿಂದ ಪಂಡರಾಪುರ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 19.03.2020 ಮತ್ತು 26.03.2020ರವರೆಗೆ, ರೈಲು ಗಾಡಿ ಸಂಖ್ಯೆ 16542 ಪಂಡರಾಪುರದಿಂದ ಯಶವಂತಪುರ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ಮತ್ತು 27.03.2020ರವರೆಗೆ, ರೈಲು ಗಾಡಿ ಸಂಖ್ಯೆ 19667 ಉದಯಪುರದಿಂದ ಮೈಸೂರು ವಾರದ ಹಮ್ ಸಫರ್ ರೈಲು ಗಾಡಿ 23.03.2020 ಮತ್ತು 30.03.2020ರ ವರೆಗೆ, ರೈಲು ಗಾಡಿ ಸಂಖ್ಯೆ 19668 ಮೈಸೂರಿನಿಂದ ಉದಯಪುರ ವಾರದ ಹಮ್ ಸಫರ್ ರೈಲು ಗಾಡಿ 26.03.2020 ಮತ್ತು 02.04.2020ರವರೆಗೆ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರು ನೈರುತ್ಯ ರ್ವೇಲ್ವೆ ವಿಭಾಗ ತಿಳಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: