ಮೈಸೂರು

ಬನ್ನೂರಿನ ಪರಿಸರ ಜಾಗೃತಿ ವೇದಿಕೆ ವತಿಯಿಂದ ಕೊರೋನಾ ವೈರಾಣು  ಕುರಿತು ಜಾಗೃತಿ : ಉಚಿತ ಮಾಸ್ಕ್ ವಿತರಣೆ

ಮೈಸೂರು,ಮಾ.20:-  ಬನ್ನೂರಿನ ಪರಿಸರ ಜಾಗೃತಿ ವೇದಿಕೆ ವತಿಯಿಂದ ಕೊರೋನಾ ವೈರಾಣು  ಕುರಿತು ಜಾಗೃತಿ ಮತ್ತು ಆಟೋ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಬನ್ನೂರು ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷರಾದ ಮಹೇದ್ರ ಸಿಂಗ್ ಕಾಳಪ್ಪ ನವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ   ಆಟೋ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಭಯ ಬೇಡ ಎಚ್ಚರವಿರಲಿ ಎಂಬ ಭಿತ್ತಿ ಪತ್ರಗಳನ್ನು ಹಂಚಿ ಕೊರೋನ ಬಗೆಗಿನ ಲಕ್ಷಣಗಳು ಮತ್ತು ವಹಿಸಬೇಕಾದ ಎಚ್ಚರಿಕೆಗಳ ಕುರಿತು   ಸಲಹೆ ನೀಡಲಾಯಿತು. ನಂತರ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: