ಮೈಸೂರು

ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ್ದಕ್ಕಾಗಿ ವಿವಿಧ ಸಂಘಟನೆಗಳಿಂದ ವಿಶೇಷ ಪ್ರಾರ್ಥನೆ : ಸಂಭ್ರಮಾಚರಣೆ

ಮೈಸೂರು,ಮಾ.20:-  ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ್ದಕ್ಕಾಗಿ  ಇಂದು ವಿವಿಧ ಸಂಘಟನೆಗಳ ವತಿಯಿಂದ  ಸಂಭ್ರಮವನ್ನು ಆಚರಿಸಲಾಯಿತು.

ಮೈಸೂರಿನ ಅಗ್ರಹಾರದ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಿರ್ಭಯಾ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ನ್ಯಾಯಾಲಯ  ಕಾಮುಕರನ್ನು ಗಲ್ಲಿಗೇರಿಸಿ ತಕ್ಕ ಪಾಠವನ್ನೇ ಕಲಿಸಿದೆ. ವಿಳಂಬವಾದರೂ ನೊಂದ ಮಹಿಳೆಯ ಪರವಾಗಿ ತೀರ್ಪು ನೀಡಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದ್ಯಸರಾದ ಮಾ.ವಿ ರಾಮ್ ಪ್ರಸಾದ್ ,ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ,ಗುರು ಬಸಪ್ಪ ,ಅಜೇಯ ಶಾಸ್ತ್ರಿ, ವಿಕ್ರಮ್ ,ವಿಜಿ ,ಪಾರ್ಥಸಾರಥಿ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: