ಮೈಸೂರು

ಬಾಲಕಿ ಅಪಹರಣ ಪ್ರಕರಣ : ವ್ಯಕ್ತಿಯ ಬಂಧನ

ಮೈಸೂರು,ಮಾ.20:- ನಂಜನಗೂಡು ಬಾಲಕಿಯೋರ್ವಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿಗೆರೆ ಪೊಲೀಸ್ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ  ಇಂಜಿನಿಯರ್ ಆಗಿರುವ ಕೇಶವನ್(32) ಎಂದು ಗುರುತಿಸಲಾಗಿದ್ದು, ಬಾಲಕಿ ನಾಪತ್ತೆಯಾದ ಕುರಿತಂತೆ ಬಾಲಕಿಯ ಪೋಷಕರು ಬಿಳಿಗೆರೆ ಠಾಣೆಗೆ ದೂರು ನೀಡಿದ್ದರು, ಅದೇ ವೇಳೆ ಕೇಶವನ್ ಕೂಡ ತಲೆಮರೆಸಿಕೊಂಡಿದ್ದ. ಪೋಷಕರು ಈತನ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು.

ತಮಿಳ್ನಾಡಿನ ಧರ್ಮಪುರಿಯಲ್ಲಿ ಈತ ತಲೆಮರೆಸಿಕೊಂಡಿದ್ದು ಈತನನ್ನು ಬಂಧಿಸಿದ ಪೊಲೀಸರು ನಂಜನಗೂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಬಿಳಿಗೆರೆ ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: