ಮೈಸೂರು

ಮಾ.19: ಬೃಹತ್ ಸಮ್ಮೇಳನ

ಮಿನಾ಼ಜುಲ್ ಖುರಾನ್ ಇಂಟರ್ ನ್ಯಾಷನಲ್ ಮೈಸೂರು ಘಟಕವು ಮಾ.19 ರಂದು ಸಂಜೆ 4 ಗಂಟೆಗೆ ತಿಲಕ್ ನಗರದ ಈದಿಗಾ ಮೈದಾನದಲ್ಲಿ ವಿಲೀನೀಕರಣ ಹಾಗೂ ಮಹಾನ್ ಸೂಫಿವರ್ಯರಾದ ಅಬ್ದುಲ್ ಖಾದರ್ ಜೀಲಾನಿ ರವರ ಚರ್ಯೆ ಎಂಬ ವಿಷಯದಡಿ ಬೃಹತ್ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಘಟಕ ಡಾ.ಜಿಯಾವುದ್ದೀನ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಮೊಹಮ್ಮದ್ ಉಸ್ಮಾನ ಷರೀಫ್, ತನ್ವೀರ್ ರಶ್ಮಿ, ಸಜ್ಜಾದ್-ಎ-ನಶೀನ್, ಹಬೀಬ್ ಅಹಮದ್ ಹುಸೇನ್, ಉಲ್ಮಾಗಳು, ಸೂಫಿ ಸಂತರು, ದರ್ವೇಶ್ ಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಮಹಿಳೆಯರಿಗಾಗಿ ಪ್ರತ್ಯೇಕ ಪರದೆ ಆಸನದ ವ್ಯವಸ್ಥೆ ಮಾಡಲಾಗಿರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಕ್ಬೂಲ್ ಅಹಮದ್ ನಿಜಾಮಿ, ಮೊಹಮ್ಮದ್ ಕೌಸರ್, ಸೈಯದ್ ಜುನೇದ್, ಮಿರ್ಜಾ ಜಂಷೀದ್ ಬೇಗ್ ಅಶ್ರಫಿ ಹಾಜರಿದ್ದರು.

Leave a Reply

comments

Related Articles

error: