ಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನ ಪ್ರಸಿದ್ಧ ಗಾಯಕಿ ಕನಿಕಾ ಕಪೂರ್‌ಗೆ ಕರೋನಾ ವೈರಸ್ ಸೋಂಕು 

ದೇಶ(ನವದೆಹಲಿ)ಮಾ.20:-  ಲಖನೌದಲ್ಲಿ ಶುಕ್ರವಾರ ಇನ್ನೂ ನಾಲ್ಕು ಜನರಿಗೆ ಕೊರೋನಾ ವೈರಸ್ ಇರುವುದನ್ನು ದೃಢಪಡಿಸಿದ್ದಾರೆ.  ಅವರಲ್ಲಿ ಬಾಲಿವುಡ್ ನ ಪ್ರಸಿದ್ಧ ಗಾಯಕಿ ಕನಿಕಾ ಕಪೂರ್ ಕೂಡ ಸೇರಿದ್ದಾರೆ. ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ. ಅವರು ಕೆಲವೇ ದಿನಗಳ ಹಿಂದೆ ಲಂಡನ್ನಿಂದ ಹಿಂದಿರುಗಿದ್ದು, ಲಕ್ನೋದ ತಾಜ್ ಹೋಟೆಲ್ ನಲ್ಲಿ ತಂಗಿದ್ದರು.

ನಂತರ ಅವರು ಶಾಲಿಮಾರ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅವರು ಲಂಡನ್ ನಿಂದ ಹಿಂದಿರುಗಿದ ಬಗ್ಗೆ ಯಾರಿಗೂ ಹೇಳದೇ ನೇರವಾಗಿ ಹೋಟೆಲ್ ಗೆ ಹೋದರು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅನೇಕ ಜನರು ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.

ಕನಿಕಾ ಕಪೂರ್‌ನಲ್ಲಿ ಕೊರೋನಾ ವೈರಸ್ ಖಚಿತವಾದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾಹಿತಿಯ ಪ್ರಕಾರ, ಕನಿಕಾ ಮಾರ್ಚ್ 14 ರಂದು ಹೋಟೆಲ್ಗೆ ಬಂದು ಮಾರ್ಚ್ 16 ರಂದು ಚೆಕ್ ಔಟ್ ಮಾಡಿದ್ದರು. ಹೋಟೆಲ್ ನಲ್ಲಿ ಅವರನ್ನು ಭೇಟಿಯಾಗಲು ಐದು ಜನರು ಬಂದಿದ್ದರು ಎನ್ನಲಾಗಿದೆ. ಪೊಲೀಸರು ಈಗ ಈ ಎಲ್ಲರನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎನ್ನಲಾಗಿದ್ದು, ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ.

ಪೊಲೀಸರು ಶಾಲಿಮಾರ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ನ್ನು ಸಹ ತಲುಪಿದ್ದು, ಅಲ್ಲಿ ಆ ಪಾರ್ಟಿಯಲ್ಲಿ ಯಾರು ಹಾಜರಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕನಿಕಾ ಕಪೂರ್ ಅವರ ಪೋಷಕರು ಮತ್ತು ಮನೆಯಲ್ಲಿರುವ ಸೇವಕನ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದು, ಪೊಲೀಸರ ಪ್ರಕಾರ 3 ಕ್ಕೆ ಲಂಡನ್‌ ನಿಂದ ದೆಹಲಿಯನ್ನು ತಲುಪಿದ್ದರು.   ನಂತರ   ದೆಹಲಿಯಿಂದ ಲಕ್ನೋಗೆ ಬಂದಿದ್ದಾರೆ. ದೆಹಲಿಯಿಂದ ಅವರು ಯಾವ ವಿಮಾನದಲ್ಲಿ ಬಂದಿದ್ದಾರೆ ಎಂಬ ಬಗ್ಗೆಯೂ ಈಗ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: