ಪ್ರಮುಖ ಸುದ್ದಿ

ಮಡಿಕೇರಿ ಸಂತೆ ಖಾಲಿ ಖಾಲಿ : ತರಕಾರಿ ಮತ್ತು ಇತರ ವಸ್ತುಗಳಿಗಾಗಿ ಪರದಾಡಿದ ಕಾರ್ಮಿಕ ವರ್ಗ

ರಾಜ್ಯ(ಮಡಿಕೇರಿ) ಮಾ.21 :- ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವ  ಪ್ರಯತ್ನವಾಗಿ ಜಿಲ್ಲಾಧಿಕಾರಿಗಳು ವಾರದ ಸಂತೆಯನ್ನು ನಿಷೇಧಿಸಿದ ಹಿನ್ನೆಲೆ, ನಗರದಲ್ಲಿ ನಡೆಯಬೇಕಿದ್ದ ಸಂತೆ ರದ್ದುಗೊಂಡು, ಗ್ರಾಮೀಣರು ಹಾಗೂ ಕಾರ್ಮಿಕರು ಅಗತ್ಯ ತರಕಾರಿ ಮತ್ತು ಇತರ ವಸ್ತುಗಳಿಗಾಗಿ ಪರದಾಡಿದರು.

ಸೋಂಕು ನಿಯಂತ್ರಣಕ್ಕಾಗಿ ಇಂದಿನ ಸಂತೆ ಸೇರಿದಂತೆ ಮುಂದಿನ ವಾರದ ಸಂತೆಯನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಿದ್ದಾರೆ. ಇದರ ಪರಿಣಾಮ ಇಲ್ಲಿನ ಸಂತೆ ಮಾರುಕಟ್ಟೆ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿತ್ತು. ಯಾವುದೇ ಸಂತೆ ವ್ಯಾಪಾರಿಗಳು ಮಡಿಕೇರಿ ಸಂತೆಗೆ ಬಂದಿರಲಿಲ್ಲ. ನಗರಕ್ಕೆ ಆಗಮಿಸಿದ್ದ ಅಕ್ಕಪಕ್ಕದ ವಿವಿಧ ಗ್ರಾಮಗಳ ಜನ ಹಾಗೂ ಕಾಫಿ ತೋಟಗಳ ಕಾರ್ಮಿಕರು ಸಂತೆಯ ಬದಲಾಗಿ ಇತರ ಅಂಗಡಿ ಮಳಿಗೆಗಳಿಗೆ ಮೊರೆ ಹೋದರು. ಇತರ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು, ಗ್ರಾಮೀಣರು ಮಾತ್ರವಲ್ಲದೆ ನಗರದ ಜನತೆ ಕೂಡ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಏನಾಗಬಹುದು ಎನ್ನುವ ಆತಂಕದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: