ದೇಶಪ್ರಮುಖ ಸುದ್ದಿ

ಕೊರೊನಾದಿಂದ ರೋಮ್ ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲು ಸಿದ್ಧತೆ

ನವದೆಹಲಿ,ಮಾ.21-ರೋಮ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸಿದ್ಧತೆ ನಡೆದಿದೆ. ಇಂದು ಮಧ್ಯಾಹ್ನ 2.30ಕ್ಕೆ ಭಾರತೀಯರನ್ನು ಕರೆತರಲು ವಿಮಾನ ರೋಮ್ ನತ್ತ ಪ್ರಯಾಣಿಸಲಿದೆ.

ಕೊರೊನಾ ವೈರಸ್‌ನಿಂದ ಎದುರಾಗಿರುವ ಬಿಕ್ಕಟ್ಟಿನಿಂದ ರೋಮ್‌ನಲ್ಲಿ ಭಾರತೀಯರು ಸಂಕಷ್ಟದಲ್ಲಿದ್ದಾರೆ. ಅವರನ್ನು ಕರೆತರಲು ಸರ್ಕಾರಿ ಸ್ವಾಮ್ಯದ ದೇಶೀಯ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ವಿಮಾನ ತೆರಳುತ್ತಿದೆ.

ಏರ್‌ ಇಂಡಿಯಾದ ‘787 ಡ್ರೀಮ್‌ಲೈನರ್‌’ ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಇಂದು ಮಧ್ಯಾಹ್ನ 2:30ಕ್ಕೆ ರೋಮ್‌ನತ್ತ ಪ್ರಯಾಣಿಸಲಿದೆ ಎಂದು ಏರ್ ಇಂಡಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಮ್‌ನಲ್ಲಿ ಸಿಲುಕಿರುವ ಎಲ್ಲ ಭಾರತೀಯರು ಏರ್‌ ಇಂಡಿಯಾ ವಿಮಾನದ ಮೂಲಕ ಭಾನುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿಯಲಿದ್ದಾರೆ ಎಂದಿದ್ದಾರೆ.

ಭಾನುವಾರದಿಂದ ಭಾರತದ ವಿಮಾನ ನಿಲ್ದಾಣಗಳಲ್ಲಿ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಇಳಿಯಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಪ್ರಕಟಣೆ ಹೊರಡಿಸಿದೆ. ಒಂದು ವಾರ ಈ ನಿರ್ಬಂಧ ಮುಂದುವರಿಸಲು ನಿರ್ಧರಿಸಲಾಗಿದೆ. (ಎಂ.ಎನ್)

 

Leave a Reply

comments

Related Articles

error: