ಮೈಸೂರು

ವಿಶ್ವಪ್ರಜ್ಞ ಕಾಲೇಜಿನಲ್ಲಿ ಜನತಾ ಕರ್ಫ್ಯೂ ಜಾಗೃತಿ ಅಭಿಯಾನ : ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸಲು ಪಣ

ಮೈಸೂರು, ಮಾ.21:- ವಿಶ್ವವನ್ನೇ ಬೆಚ್ಚಿಬೀಳಿಸಿದ ಮಾರಣಾಂತಿಕ ಕೊರೊನಾ ವೈರಸ್‍ನ್ನು ತಡೆಗಟ್ಟುವಲ್ಲಿ ಎಲ್ಲ ದೇಶಗಳು ಶತಾಯಗತಾಯ ಪ್ರಯತ್ನದಲ್ಲಿದೆ. ಈ ಪ್ರಯತ್ನಕ್ಕೆ ನಮ್ಮ ದೇಶವು ಹೊರತಲ್ಲ. ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಈ ವೈರಸ್‍ನ್ನು ನಿಯಂತ್ರಿಸಲು   ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇದೇ ಭಾನುವಾರ 22ರಂದು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂವನ್ನು ಪಾಲಿಸುವಂತೆ ಮನವಿ ಮಾಡಿದ್ದರು.

ಕೊರೊನಾ ವೈರಸ್ ಹರಡುವಿಕೆಯ ತಡೆಗಟ್ಟಲು ನಡೆಸುವ ಈ ಕರ್ಫ್ಯೂವನ್ನು ಮೈಸೂರಿನಲ್ಲಿ ಯಶಸ್ವಿಗೊಳಿಸಬೇಕೆಂದು ಪಣತೊಟ್ಟಿರುವ  ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜು, ಮೈಸೂರು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಾಲೇಜು ವಾಹನದಲ್ಲಿ ಧ್ವನಿವರ್ಧಕವನ್ನು ಅಳವಡಿಸಿ ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಜನತಾ ಕರ್ಫ್ಯೂನ ಮಹತ್ವದ ಅರಿವನ್ನು ಮೂಡಿಸುವ ಸಲುವಾಗಿ ಸಂಪೂರ್ಣ ಮೈಸೂರು ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮಕ್ಕೆ ಮೈಸೂರಿನ ಉಪ ಪೊಲೀಸ್ ಆಯುಕ್ತ ಡಾ.ಎ.ಎನ್.ಪ್ರಕಾಶ್ ಗೌಡ  ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು ಮಾರಣಾಂತಿಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವುದು ಬರೀ ಸರ್ಕಾರದಿಂದ ಮಾತ್ರ ಸಾಧ್ಯವಾಗುವ ಕೆಲಸವಲ್ಲ, ಸರ್ಕಾರದೊಂದಿಗೆ ಸಾರ್ವಜನಿಕರು ಕೂಡ ಸಹಕರಿಸಬೇಕು. ಈ ನಿಟ್ಟಿನಲ್ಲಿ ವಿಶ್ವಪ್ರಜ್ಞ ಪಿಯು ಕಾಲೇಜು ಇಂದು ಹಮ್ಮಿಕೊಂಡಿರುವ ಸಾರ್ವಜನಿಕರಲ್ಲಿ ಜನತಾ ಕರ್ಫ್ಯೂನ ಮಹತ್ವದ ಅರಿವನ್ನು ಮೂಡಿಸುವ ಜಾಗೃತಿ ಅಭಿಯಾನದಂತಹ ಸಾಮಾಜಿಕ ಕಳಕಳಿಯ  ಕಾರ್ಯಕ್ರಮ  ನಿಜಕ್ಕೂ ಶ್ಲಾಘನೀಯವಾದದ್ದು. ಈ ಸಾಮಾಜಿಕ ಕಳಕಳಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಹೊಂದಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ, ಖಜಾಂಚಿ ಎಸ್.ಮನೋಹರ್, ಭೌತಶಾಸ್ತ್ರದ ಪ್ರಾಚಾರ್ಯ ಹೆಚ್.ಎಸ್.ರಂಗನಾಥ್, ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಪ್ರಾಂಶುಪಾಲ ರಚನ್ ಅಪ್ಪಣಮಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಪಿ. ಹರೀಶ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: