ಮೈಸೂರು

ಎದೆನೋವಿನಿಂದ ಬಳಲುತ್ತಿದ್ದ  60ವರ್ಷದ ವೃದ್ಧೆಯ ಸಹಾಯಕ್ಕೆ ಧಾವಿಸಿದ ಬಿ ವೈ ವಿಜಯೇಂದ್ರ ಅಭಿಮಾನಿ ಬಳಗ

ಮೈಸೂರು,ಮಾ.22:- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಂದು ದೇಶದಾದ್ಯಂತ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಟಿ ನರಸೀಪುರ ಪಟ್ಟಣದಲ್ಲೂ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ  ವ್ಯಕ್ತವಾಗಿದೆ.

ಜನತಾ ಕರ್ಫ್ಯೂನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತು ಸೇವೆಗಳನ್ನು ಒದಗಿಸಲು ಟಿ ನರಸೀಪುರ ತಾಲೂಕು ಬಿ ವೈ ವಿಜಯೇಂದ್ರ ಅಭಿಮಾನಿ ಬಳಗ ಮುಂದಾಗಿದೆ. ಬಿಜೆಪಿ ಮುಖಂಡ ಮಣಿಕಂಠ ರಾಜು ಗೌಡ ನೇತೃತ್ವದಲ್ಲಿ ಸಾರ್ವಜನಿಕರಿಗೆ ತುರ್ತು ಸೇವೆಗಳನ್ನು ಒದಗಿಸಲು ತಂಡ ಮುಂದಾಗಿದ್ದು, ಟಿ ನರಸೀಪುರ ತಾಲೂಕಿನ ನವಿಲೂರು ಗ್ರಾಮದಲ್ಲಿ ಎದೆನೋವಿನಿಂದ ಬಳಲುತ್ತಿದ್ದ  60ವರ್ಷದ ವೃದ್ಧೆಯ ಸಹಾಯಕ್ಕೆ   ವಿಜಯೇಂದ್ರ ಅಭಿಮಾನಿ ಬಳಗ ಧಾವಿಸಿದ್ದು, ವೃದ್ದೆಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದೆ. ನಿನ್ನೆಯಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಟಿ ನರಸೀಪುರ ತಾಲೂಕಿನ ಜನತೆಯ ತುರ್ತು ಅಗತ್ಯಗಳನ್ನು ಪಡೆಯಲು ವಿಜಯೇಂದ್ರ ಅಭಿಮಾನಿ ಬಳಗ ಸಹಾಯವಾಣಿ ಸಂಖ್ಯೆ ನೀಡಿತ್ತು. ನುಡಿದಂತೆ ಸೇವೆಗಳನ್ನು ಒದಗಿಸಲು ಮಣಿಕಂಠ ರಾಜುಗೌಡ ನೇತೃತ್ವದ ತಂಡ ಮುಂದಾಗಿದೆ. ಬಿ ವೈ ವಿಜಯೇಂದ್ರ ಅಭಿಮಾನಿ ಬಳಗದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: