ಮೈಸೂರು

ಕೊರೋನಾ ವೈರಸ್ ಸೋಂಕು ಹರಡುವ ಹಿನ್ನೆಲೆ : ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಬ್ರೇಕ್

ಮೈಸೂರು,ಮಾ.23:- ಕೊರೋನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ  ಮೈಸೂರು ಜಿಲ್ಲೆಯನ್ನು ಲಾಕ್ ಡೌನ್ ಎಂದು ಘೋಷಿಸಲಾಗಿದ್ದು, ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ಮೀನು, ಕೋಳಿ, ಕುರಿ ಸೇರಿದಂತೆ ಇತರೆ ಮಾಂಸಕ್ಕೆ ಬ್ರೇಕ್ ಹಾಕಲಾಗಿದ್ದು, ಮೈಸೂರಿನ ಮಾಂಸದಂಗಡಿಗಳು ಕ್ಲೋಸ್ ಆಗಿವೆ. ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು  ಮಾಲೀಕರು ಮುಚ್ಚಿದ್ದಾರೆ.  ನಮಗೆ ನಷ್ಟವಾಗಿದೆ ಏನ್ ಮಾಡೋದು ಎಂದು  ಮಳಿಗೆಗಳ ಮಾಲಕರು ಬೇಸರ ವ್ಯಕ್ತಪಡಿಸಿದ್ದು, ನಮಗೆ ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ದೇವರಾಜ ಮಾರುಕಟ್ಟೆ ಬಳಿಯ ಮಾಂಸದಂಗಡಿಗಳು ಬಂದ್ ಆಗಿವೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: