ಸುದ್ದಿ ಸಂಕ್ಷಿಪ್ತ

ಶ್ರೀ ಸಂತುಷ್ಟ ತೀರ್ಥರ ಆರಾಧನೆ ಮುಂದೂಡಿಕೆ

ಮೈಸೂರು, ಮಾ.23:- ಭಾರತದಲ್ಲೆಲ್ಲಾ ಹರಡುತ್ತಿರುವ ಕೊರೊನಾ ಸೋಂಕಿನ ತಡೆಗಾಗಿ ಕರ್ನಾಟಕ ಸರ್ಕಾರ ಹಾಗೂ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಆದೇಶದಂತೆ ಮೈಸೂರಿನ ಉತ್ತರಾದಿ ಮಠದಲ್ಲಿ ಮಾ.24ರಂದು ಮಂಗಳವಾರ ನಡೆಸಬೇಕಾಗಿದ್ದ ಶ್ರೀ ಸಂತುಷ್ಟ ತೀರ್ಥ ಆರಾಧನಾ ನಿಮಿತ್ತವಾದ ಅನ್ನದಾನಾದಿ ಕಾರ್ಯಕ್ರಮಗಳನ್ನು ಈಗ ನಡೆಸದೇ ಮುಂದಿನ ದಿನಗಳಲ್ಲಿ ನಡೆಸಲಾಗುವುದು.
ಇದಕ್ಕೆ ಶ್ರೀ ಮಠದ ಭಕ್ತರು ಸಹಕರಿಸಬೇಕೆಂದು ಉತ್ತರಾದಿ ಮಠದ ಮಠಾಧಿಕಾರಿಗಳಾದ ಪಂಡಿತ್ ಅನಿರುದ್ಧಾಚಾರ್ಯ ಪಾಂಡುರಂಗಿಯವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9448147459 ಸಂಪರ್ಕಿಸಬಹುದು (ಎಸ್.ಎಚ್)

Leave a Reply

comments

Related Articles

error: