ಮೈಸೂರು

ಮೈಸೂರು ಜಿಲ್ಲೆ ಲಾಕ್ ಡೌನ್ ಹಿನ್ನೆಲೆ : ಜನತೆಗೆ ಸೇವೆ ನೀಡಲಿದೆ ಮೈಸೂರು ಕೋವಿಡ್ ಕೇರ್ ಟೀಮ್; ಶಾಸಕ ಎಸ್ ಎ ರಾಮದಾಸ್ ಮಾಹಿತಿ

ಮೈಸೂರು,ಮಾ.23:-   ಮೈಸೂರಿನಲ್ಲಿ  ಎರಡನೆಯ ವ್ಯಕ್ತಿಯಲ್ಲಿ   ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ  ಎಲ್ಲರೂ ಆತಂಕ ಪಡುವಂತಹ ಪರಿಸ್ಥಿತಿ ಉಂಟಾಗಿದೆ . ಹಾಗಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ  ಸಿಎಎ, ಎಸ್ ಕೆ ಸಿ ಸಿ ಐ , ಎನ್ ಸಿ ಐ ಸಿ , ರೆಡಾಲ್, ಬಿ ಎ ಐ , ಮೆರೇಡ್ಕೋ,  ಯೋಗಾ ಫೆಡರೇಷನ್, ಟ್ರಾವೆಲ್ಸ್ ಅಸೋಸಿಯೇಷನ್, ಹೋಟೆಲ್ ಅಸೋಸಿಯೇಷನ್, ಸಿಸ್ಟ್ ಮ್ಯಾಮ್ ಮತ್ತು ಫಾರ್ಮ ಅಸೋಸಿಯೇಷನ್ ಹೀಗೆ ವಿವಿಧ ಸಂಸ್ಥೆಗಳು ಒಟ್ಟಾಗಿ ಸೇರಿ ಸರ್ಕಾರದಿಂದ ಹಾಗೂ ನಾಗರೀಕರಿಂದ ಯಾವ ರೀತಿಯ ಕೆಲಸಗಳಾಗಬೇಕೆಂದು ಸುಮಾರು ಎರಡು ಗಂಟೆಗಳ ಕಾಲ ಚರ್ಚೆಯನ್ನು ಮಾಡಲಾಗಿದೆ. ಸರ್ಕಾರದ ಜೊತೆ ಕೈ ಜೋಡಿಸಲು ಮಾಜಿ ಸಚಿವ  ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕರಾದ  ಎಸ್. ಎ. ರಾಮದಾಸ್  ಅವರ ನೇತೃತ್ವದಲ್ಲಿ “ಮೈಸೂರು ಕೋವಿಡ್ ಕೇರ್ ಟೀಮ್ (MCCT)” ಎಂಬ ಹೊಸ ಟೀಮ್  ಸಿದ್ಧಗೊಂಡಿದೆ.

ಈ ತಂಡದಿಂದ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಅದರ ಜವಾಬ್ದಾರಿಯನ್ನು ನೀಡಲಾಗಿದ್ದು, ವಿಶೇಷವಾಗಿ ನಾಗರೀಕರಿಗೆ ಬೇಕಾಗಿರುವ ಸಹಾಯವನ್ನು ಯಾಚಿಸಲು ಅವರು ಹೊರಗೆ ಬಂದು ಸಹಾಯ ಯಾಚಿಸುವ ಬದಲು , ದೂರವಾಣಿಯ ಮೂಲಕ ಕಾಲ್ ಸೆಂಟರ್ ಗೆ ಕರೆ ಮಾಡಿ ಎನ್ನುವ ವಿಚಾರವನ್ನು ತಿಳಿಸಲಾಗಿದೆ.  ಕಾಲ್ ಸೆಂಟರ್ ನ ಮುಖ್ಯಸ್ಥರಾಗಿ   ಪ್ರಶಾಂತ್   ಕೆಲಸವನ್ನು ನಿರ್ವಹಿಸುತ್ತಿದ್ದು, ಕಾಲ್ ಸೆಂಟರ್ ನಂಬರ್- 4001100 ಇಂದಿನಿಂದ ಆರಂಭವಾಗಿದೆ.  ಜೊತೆಗೆ ಬರುವ ಕರೆಗಳ ವಿಚಾರಗಳನ್ನು ತೆಗೆದುಕೊಂಡು ಅದನ್ನು ವ್ಯವಸ್ಥಿತವಾಗಿ ಪ್ರಸ್ತುತ ಪಡಿಸುವ ದೃಷ್ಟಿಯಿಂದ ಕೇರ್ ಸೆಂಟರ್ ನ್ನು ತೆರೆಯಲು ನಿರ್ಣಯಿಸಲಾಗಿದೆ.   ಕೇರ್ ಸೆಂಟರ್ ಜವಾಬ್ದಾರಿಯನ್ನು   ಶ್ರೀಹರಿ  ನಿರ್ವಹಿಸಲಿದ್ದಾರೆ.

ಕಡು ಬಡವರು, ಹಾಗೂ ದಿನ ನಿತ್ಯ ಹೊರಗಿನ ಆಹಾರವನ್ನು ಅವಲಂಬಿಸಿರುವವರ ಮೇಲೆ ವಿಶೇಷವಾಗಿ ಗಮನ ಹರಿಸಲು ತುರ್ತಾಗಿ ಬೇಕಾಗಿರುವ ಆಹಾರ ಪದಾರ್ಥಗಳನ್ನು ಡೋನರ್ಸ್ಗಳ ಮೂಲಕ ಪಡೆದುಕೊಂಡು ವಿತರಿಸಲು ಒಂದು ಸೆಂಟರ್ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.  ಇದಕ್ಕೆ ಸಂಬಂಧಿಸಿದಂತೆ ಫುಡ್ ಸ್ಟೋರೇಜ್ ಸೆಂಟರ್ ನ ಜವಾಬ್ದಾರಿಯನ್ನು ಗಣೇಶ್  ಅವರಿಗೆ ವಹಿಸಲಾಗಿದೆ.

ಜನಸಾಮಾನ್ಯರ ಜಾಗೃತಿಗೆ  ಔಟ್ ಡೋರ್ ಪಬ್ಲಿಸಿಟಿ ಸೆಂಟರ್ ಮಾಡುವ ನಿರ್ಣಯ ಮಾಡಲಾಗಿದ್ದು, ಇದರ ಜವಾಬ್ದಾರಿಯನ್ನು   ವಿವೇಕ್ ಅವರು ತೆಗೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ಮನೆ ಮನೆಗೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು  ಕಾಂತರಾಜ್ ,   ಮನು,   ವಿಷ್ಣು   ಹಂಚಿಕೊಂಡಿದ್ದು, ಪ್ರತಿ ದಿನ ಆಯಾಯ ಸಂದರ್ಭದಲ್ಲಿ ಅಗತ್ಯವಿರುವ ಸಂದೇಶಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಿದ್ದಾರೆ.   ವಿಶೇಷವಾಗಿ ಸಿಸ್ಕಾಂ ಶಾಲೆಯ ಮೂಲಕವಾಗಿ ಜನಸಾಮಾನ್ಯರಿಗೆ ವಿಷಯವನ್ನು ತಲುಪಿಸುವ ದೃಷ್ಟಿಯಿಂದ  ಸ್ಕೂಲ್ ಮತ್ತು ಪೇರೆಂಟ್ಸ್ ಕೋರ್ಡಿನೇಷನ್ ಟೀಂ ನ್ನು ತಯಾರು ಮಾಡಲು ನಿರ್ಧರಿಸಲಾಗಿದೆ. ಇದರ ಜವಾಬ್ದಾರಿಯನ್ನು   ಮಂಜುನಾಥ್ ಅವರಿಗೆ ವಹಿಸಲಾಗಿದೆ.

ಜನಸಾಮಾನ್ಯರಿಗೆ ಅವಶ್ಯಕವಾದ ಔಷಧ ಉಪಚಾರಗಳ ಕುರಿತು ಫಾರ್ಮಾ ಕೋರ್ಡಿನೇಷನ್ ಟೀಂ ನ್ನು ತಯಾರು ಮಾಡಲಾಗಿದ್ದು,  ಇದರ ಜವಾಬ್ದಾರಿಯನ್ನು   ಸುಧೀರ್ ಅವರಿಗೆ ನೀಡಲಾಯಿತು.  ನಮ್ಮ ರಾಜ್ಯದ ಜನರ ಜೊತೆಗೆ ಬೇರೆ ಬೇರೆ ರಾಜ್ಯದಿಂದ ಬಂದಿರುವ Construction workers ಗಳ ಹಿತ ದೃಷ್ಟಿಯಿಂದ ಅವರು ಕೆಲಸ ಮಾಡುತ್ತಿರುವ ಜಾಗದಲ್ಲೇ ಉಳಿಸಿಕೊಂಡು ಅವರಿಗೆ ಬೇಕಾಗಿರುವ  ಆಹಾರ, ಮೆಡಿಕಲ್ ಚಕಪ್ ಎಲ್ಲದರ ಬಗ್ಗೆ ಚಿಂತನೆ ಮಾಡಿ, Construction workers Co-ordination Team ನ್ನು ತಯಾರು ಮಾಡಿ   ಸುಬ್ರಹ್ಮಣ್ಯ, ರತ್ನ ರಾಜ್ ಹಾಗೂ ದಿವ್ಯೇಶ್ ಅವರಿಗೆ ಇದರ ಜವಾಬ್ದಾರಿಯನ್ನು ನೀಡಲಾಗಿದೆ.

ಪೋಲಿಸ್ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ   ಪತ್ರಗಳ  ಮೂಲಕ ತಿಳಿಸುವ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬರಿಗೂ ಬೇಕಾಗಿರುವ ಆಹಾರ ಪದಾರ್ಥಗಳನ್ನು , ಅವಶ್ಯಕ ವಸ್ತುಗಳನ್ನು ಮುಂದಿನ 31 ನೇ ತಾರೀಖಿನ ವರೆಗೂ ಸಂಗ್ರಹ ಮಾಡಿ ಇಟ್ಟುಕೊಳ್ಳಿ, ನಿನ್ನೆ ಆದಂತಹ ಜನತಾ ಕರ್ಪ್ಯೂ ನ ರೀತಿಯಲ್ಲಿ ಇದೇ ತಿಂಗಳ 31 ನೇ ತಾರೀಖಿನ ವರೆಗೂ ಕರ್ಪ್ಯೂಗೆ ಸಹಕರಿಸಿ, ಯಾರೂ ಕೂಡಾ ಹೊರಗೆ ಬಂದು ರೋಗವನ್ನು ನಿಮ್ಮ ಮನೆಗೆ ನೀವೇ ತೆಗೆದುಕೊಂಡು ಹೋಗಬೇಡಿ ಎಂದು ಶಾಸಕರು ತಿಳಿಸಿದರು.  ನಿಮ್ಮ ಕರ್ತವ್ಯ, ಜವಾಬ್ದಾರಿಯಲ್ಲಿ ಲೋಪ ಉಂಟಾದರೆ ಅದರ ಮೇಲೆ ಕ್ರಮವನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಬೇಕು ಎಂದು  ಶಾಸಕರು  ತಿಳಿಸಿದರು.

ಹೋಟೆಲ್ ಗಳು, ಬೇಕರಿಗಳು ಇಂತಹ ಕೇಂದ್ರಗಳಲ್ಲಿ ಆಹಾರವನ್ನು ಸ್ಥಳದಲ್ಲೇ ವಿತರಣೆ ಮಾಡುವಂತಹ , ಅಲ್ಲೇ ತಿನ್ನುವಂತಹ ವ್ಯವಸ್ಥೆಗಳು ಆಗಬಾರದು ಎನ್ನುವಂತಹ ವಿಚಾರವನ್ನು ಈಗಾಗಲೇ ತಿಳಿಸಲಾಗಿದೆ. ಆದರೂ ಕೂಡಾ ಕೆಲವು ಕೇಂದ್ರಗಳಲ್ಲಿ ಬೆಳಿಗ್ಗೆಯಿಂದ ವಿತರಿಸಲಾಗುತ್ತಿದೆ ಎನ್ನುವ ವಿಚಾರಗಳು ಕೇಳಿ ಬಂದಿವೆ.

ಆ ದೃಷ್ಟಿಯಿಂದ ಈ ಕ್ಷಣದಿಂದ ಜಿಲ್ಲಾಧಿಕಾರಿಗಳು, ಪೊಲೀಸ್ ರ ಜೊತೆಯಲ್ಲಿ ಕೋರ್ಡಿನೇಷನ್ ನ್ನು ಮಾಡಿಕೊಂಡು ಯಾವುದೇ ಕಾರಣಕ್ಕೂ ಆಹಾರವನ್ನು ಆ ಸ್ಥಳದಲ್ಲೇ ನೀಡಬಾರದು, ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರ ಮನ್ನಣೆ ನೀಡಲಾಗಿದೆ. ಇಲ್ಲವಾದರೆ ಅವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಲು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ   ನಾರಾಯಣ ಗೌಡರಿಗೆ   ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: