
ಕರ್ನಾಟಕಪ್ರಮುಖ ಸುದ್ದಿ
ಕೊರೊನಾ ವೈರಸ್ ತಡೆಗೆ ಉಳಿತಾಯದ 1 ಲಕ್ಷ ರೂ. ಅನ್ನು ಸರ್ಕಾರಕ್ಕೆ ನೀಡಿದ ವಿದ್ಯಾರ್ಥಿನಿ
ಬೆಂಗಳೂರು,ಮಾ.23-ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ವಿದ್ಯಾರ್ಥಿನಿಯೊಬ್ಬರು ತನ್ನ ಉಳಿತಾಯದ ಹಣವನ್ನು ವೈರಸ್ ತಡೆಗೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ನೀಡಿದ್ದಾರೆ.
ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಮೂಲ್ಯ 1 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅಮೂಲ್ಯ ತಾನು ಉಳಿತಾಯ ಮಾಡಿದ್ದ 1 ಲಕ್ಷ ರೂಪಾಯಿಗಳನ್ನು COVID19 ಪರಿಹಾರಕ್ಕೆ ನೀಡಿದ್ದಾರೆ. ಆಕೆಯ ನಿಸ್ವಾರ್ಥತೆ, ಮಾನವೀಯತೆ, ದಯೆ ನಿಜವಾಗಿಯೂ ಬೆರಗುಗೊಳಿಸುವಂತದ್ದು. ನಿಮ್ಮ ಕೊಡುಗೆಯನ್ನು ಸ್ವೀಕರಿಸಿದ್ದಕ್ಕಾಗಿ ನಾವು ಆಭಾರಿಯಾಗಿದ್ದೇವೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅಮೂಲ್ಯ ಹಣ ನೀಡಿದ್ದಾರೆ. ಈ ವೇಳೆ ಆರೋಗ್ಯ ಸಚಿವ ಶ್ರೀರಾಮುಲು, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಇದ್ದರು. (ಎಂ.ಎನ್)