ಪ್ರಮುಖ ಸುದ್ದಿ

ಕೊರೊನಾ ವೈರಸ್ ನಿಯಂತ್ರಣ ಉಸ್ತುವಾರಿ : ಹೋಬಳಿ ಮಟ್ಟದಲ್ಲಿ ಅಧಿಕಾರಿಗಳ ನೇಮಕ

ರಾಜ್ಯ( ಮಡಿಕೇರಿ) ಮಾ.24 :- ಕೊಡಗು ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ.
ಮಡಿಕೇರಿ(ನಗರ ವ್ಯಾಪ್ತಿಗೆ) ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, (ಗ್ರಾಮಾಂತರ ವ್ಯಾಪ್ತಿ) ಉಪ ನಿರ್ದೇಶಕರು, ಕೃಷಿ ಇಲಾಖೆ, ಸಂಪಾಜೆ ಹೋಬಳಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಭಾಗಮಂಡಲ ಹೋಬಳಿಗೆ ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ,
ನಾಪೋಕ್ಲು ಹೋಬಳಿಗೆ ಅಬಕಾರಿ ಉಪ ಆಯುಕ್ತರು, ಕುಶಾಲನಗರ(ನಗರ ವ್ಯಾಪ್ತಿ) ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ, ಕುಶಾಲನಗರ (ಗ್ರಾಮಾಂತರ ವ್ಯಾಪ್ತಿ) ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಮಡಿಕೇರಿ ತಾಲ್ಲೂಕು, ಸೋಮವಾರಪೇಟೆ (ನಗರ ವ್ಯಾಪ್ತಿ) ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ, ಸೋಮವಾರಪೇಟೆ (ಗ್ರಾಮಾಂತರ ವ್ಯಾಪ್ತಿ) ಸಹಕಾರ ಸಂಘಗಳ ಉಪ ನಿಬಂಧಕರು, ಶಾಂತಳ್ಳಿ ಹೋಬಳಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಧಿಕಾರಿ, ಕೊಡ್ಲಿಪೇಟೆ ಹೋಬಳಿಗೆ ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಧಿಕಾರಿ, ಶನಿವಾರಸಂತೆ ಹೋಬಳಿಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ, ಶುಂಠಿಕೊಪ್ಪ ಹೋಬಳಿಗೆ ಉಪ ನಿರ್ದೇಶಕರು, ಡಯಟ್ ಕೂಡಿಗೆ ಸೋಮವಾರಪೇಟೆ, ಅಮ್ಮತ್ತಿ ಹೋಬಳಿಗೆ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಡಿಕೇರಿ, ಪೊನ್ನಂಪೇಟೆ ಹೋಬಳಿಗೆ ತಾಲ್ಲೂಕು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ವಿರಾಜಪೇಟೆ, ಬಾಳೆಲೆ ಹೋಬಳಿಗೆ ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳು, ಕೊಡಗು ಜಿಲ್ಲೆ, ವಿರಾಜಪೇಟೆ(ನಗರ ವ್ಯಾಪ್ತಿ) ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಮಡಿಕೇರಿ, ವಿರಾಜಪೇಟೆ (ಗ್ರಾಮಾಂತರ ವ್ಯಾಪ್ತಿಗೆ) ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ, ಶ್ರೀಮಂಗಲ ಹೋಬಳಿಗೆ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಡಿಕೇರಿ ಹಾಗೂ ಹುದಿಕೇರಿ ಹೋಬಳಿಗೆ ಪರಿಸರ ಅಧಿಕಾರಿ, ಮಡಿಕೇರಿ, ಕೊಡಗು ಜಿಲ್ಲೆ.
ನೋಡಲ್ ಅಧಿಕಾರಿಯಾಗಿ ನೇಮಿಸಿದ ಅಧಿಕಾರಿಗಳು ತಮಗೆ ವಹಿಸಿದ ವ್ಯಾಪ್ತಿಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಹಾಗೂ ಪೋನ್ ಮತ್ತು ವಾಟ್ಸ್‍ಆಪ್ ಮುಖಾಂತರ ನಿರಂತರ ಸಂಪರ್ಕದಲ್ಲಿರುವುದು ಮತ್ತು ಸೂಕ್ತ ಪ್ರತಿಕ್ರಿಯೆ ನೀಡಿ ತುರ್ತು ಕ್ರಮವಹಿಸುವುದು ಮತ್ತು ಇದರೊಂದಿಗೆ ದಿನ ನಿತ್ಯದ ಅಗತ್ಯ ವಸ್ತುಗಳು ಕೊರತೆ ಆಗದಂತೆ ಸೂಕ್ತ ಕ್ರಮವಹಿಸುವುದು.
ಕೊರೊನಾ ವೈರಸ್ ಸಂಬಂಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪನ್ಮೂಲ ಕೇಂದ್ರ ಮತ್ತು ಕೋವಿಡ್-19 ಕೇರ್ ಸೆಂಟರ್ ಸ್ಥಾಪಿಸಲು ಸ್ಥಳ ಗುರುತಿಸಿ ಕ್ರಮವಹಿಸುವುದು. ಕೋವಿಡ್-19ರ ಸಂಬಂಧ ಮಾನವ ಸಂಪನ್ಮೂಲ ಮತ್ತು ಅಗತ್ಯ ಸಾಧನಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು. ಸರ್ಕಾರ ಮತ್ತು ಜಿಲ್ಲಾಧಿಕಾರಿ ಕಚೇರಿಯಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶವನ್ನು ಪಾಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: