ಮೈಸೂರು

ಕುಡಿದು ಗಲಾಟೆ ಮಾಡಿಕೊಂಡು ಕಾರ್ಮಿಕರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು,ಮಾ.24:- ಕುಡಿದು ಗಲಾಟೆ ಮಾಡಿದ ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ನರಸಿಂಹ ರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಮೂರ್ತಿರಾಜ(30)ಹತ್ಯೆಯಾದವನಾಗಿದ್ದು, ಈತನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ರವಿ ಕೊಲೆ ಮಾಡಿದವನಾಗಿದ್ದು, ಆತನನ್ನು ಬಂಧಿಸಲಾಗಿದೆ. ಬನ್ನಿಮಂಟಪಪದ ಬಡಾವಣೆಯಲ್ಲಿರುವ  ಅಂಥೋಣಿ ಪ್ಯಾಟ್ರಿಕ್ ಅವರ ಮಾಲೀಕತ್ವದ ಮರಿಯ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ರವಿಯು ಕೊಲೆಯಾದ ಮೂರ್ತಿರಾಜ, ಬಾಬು ಹಾಗೂ ಮಾರಿಮುತ್ತು ಎಂಬವರನ್ನು ತಮಿಳುನಾಡಿನಿಂದ ಕೆಲಸಕ್ಕೆ ಕರೆದು ಕೊಂಡು ಬಂದಿದ್ದ ಎನ್ನಲಾಗಿದೆ.

ನಾಲ್ವರು ಕಾರ್ಖಾನೆಯಲ್ಲಿಯೇ ಇರುವ ಕೊಠಡಿಯಲ್ಲಿ ವಾಸವಿದ್ದರು. ರಾತ್ರಿ ವೇಳೆ ಮೂರನೇ ಮಹಡಿಯಲ್ಲಿ ಮಲಗುತ್ತಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಇದ್ದ ಕಾರಣ ಕೆಲಸ ಇಲ್ಲದ್ದರಿಂದ ವಿಶ್ರಾಂತಿ ತೆಗೆದುಕೊಂಡು ರಾತ್ರಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ರವಿ ಹಾಗೂ ಮೂರ್ತಿರಾಜ ನಡುವೆ ಜಗಳ ಆರಂಭವಾಗಿದ್ದು ಬಾಟಲಿಯಿಂದ ರವಿ  ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇದರಿಂದ ಮೂಗಿನಲ್ಲಿ ರಕ್ತಬಂದು ಮೂರ್ತಿರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಾರ್ಖಾನೆ ಮಾಲೀಕ ಅಂಥೋಣಿ ಪ್ಯಾಟ್ರಿಕ್ ನೀಡಿದ ದೂರಿನ ಮೇರೆಗೆ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರವಿಯನ್ನು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: