ಮೈಸೂರು

ಟಿ.ಪಿ.ಕೈಲಾಸಂ ನಾಟಕದಲ್ಲಿ ಹಾಸ್ಯ, ಗಾಂಭೀರ್ಯ ಅಡಕವಾಗಿರುತ್ತದೆ : ನೀ.ಕೃ.ರಾಮಶೇಷನ್

ಟಿ.ಪಿ.ಕೈಲಾಸಂ ಅವರ ನಾಟಕಗಳಲ್ಲಿ ಗಾಂಭೀರ್ಯ,ದುರಂತ ಹಾಗೂ ಹಾಸ್ಯದ ಅಂಶಗಳು ಅಡಕವಾಗಿರುತ್ತವೆ ಎಂದು ವಿಶ್ರಾಂತ ಪ್ರಾಧ್ಯಾಪಕ ನೀ.ಕೃ.ರಾಮಶೇಷನ್ ಹೇಳಿದರು.

ಮೈಸೂರು ವಿವಿ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಸಭಾಂಗಣದಲ್ಲಿ ಬುಧವಾರ ಕನ್ನಡ ಸಂಘ, ಕನ್ನಡ ವಿಭಾಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂಸ ಅವರ ‘ವಿಗಡ ವಿಕ್ರಮರಾಯ ಮತ್ತು ಟಿ.ಪಿ.ಕೈಲಾಸಂ ಅವರ ‘ತಾಳಿ ಕಟ್ಟೋಕ್ಕೂಲೀನೆ?’ ಎಂಬ ನಾಟಕಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೈಲಾಸಂ ಅವರು ತಮ್ಮ ನಾಟಕಗಳಲ್ಲಿ ಹಾಸ್ಯದ ಜೊತೆ ಜೊತೆಯಲ್ಲೇ ಗಂಭೀರ ಚಿಂತನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಪ್ರಯತ್ನ ಮಾಡುತ್ತಿದ್ದರು. ‘ತಾಳಿ ಕಟ್ಟೋಕ್ಕೂಲೀನೆ’ ಎಂಬ ನಾಟಕದಲ್ಲಿ ವರದಕ್ಷಿಣೆ ಎಂಬ ಪೆಡಂಭೂತದ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಕೈಲಾಸಂ ಅವರು ಹೆಚ್ಚಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಸಮಾಜದ ಅವ್ಯವಸ್ಥೆ ಬಗ್ಗೆ ವಿಡಂಬನೆ ಮಾಡುತ್ತಿದ್ದರು ಎಂದು ತಿಳಿಸಿದರು.

ನಂತರ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಚ್.ಎಸ್.ಉಮೇಶ್ ಸಂಸ ಅವರ ‘ವಿಗಡ ವಿಕ್ರಮರಾಯ’ ನಾಟಕದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ‍್ಯಕ್ಷ ಡಾ.ವೈ.ಡಿ.ರಾಜಣ್ಣ, ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಡಾ.ಎಲ್.ಲಿಂಬ್ಯಾನಾಯ್ಕ್, ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತಾ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ವಿಜಯಲಕ್ಷ್ಮಿ, ಸಂಚಾಲಕ ಡಾ.ಟಿ.ಕೆ.ಕೆಂಪೇಗೌಡ, ಡಾ.ಎಂ.ಬಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

 

 

 

Leave a Reply

comments

Related Articles

error: