ಸುದ್ದಿ ಸಂಕ್ಷಿಪ್ತ

ಮಾರ್ಚ್ 25-26 ರಂದು ನೀರು ವ್ಯತ್ಯಯ

ಮಂಡ್ಯ (ಮಾ.25): ಮಂಡ್ಯ ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಯಡಿ ರಾಗಿಮುದ್ದನಹಳ್ಳಿ ನಮೀಪ ಮೊದಲನೇ ಹಂತದ ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಕಂಡು ಬಂದು ಮಾರ್ಚ್ 24 ರಂದು ಮಂಡ್ಯ ನಗರಕ್ಕೆ ಸದರಿ ಕೊಳವೆ ಮಾರ್ಗದ ಮೂಲಕ ನೀರನ್ನು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ.

ನಗರದ ಸಾರ್ವಜನಿಕರಿಗೆ ಮಾರ್ಚ್ 25 ಮತ್ತು 26ರಂದು ನೀರಿನ ವ್ಯತ್ಯಯ ಉಂಟಾಗಲಿದೆ. ಆದರಿಂದ ಸಾರ್ವಜನಿಕರು ನೀರು ಬಂದ ವೇಳೆ ಶೇಖರಿಸಿಟ್ಟುಕೊಳ್ಳ ಬೇಕು ಎಂದು ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಕನನೀಸ ಮತ್ತು ಒಳಚರಂಡಿ, ನಿರ್ವಹಣಾ ಮಂಡಳಿಯ ಉಪವಿಭಾಗ ಅಧಿಕಾರಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: