
ಮೈಸೂರು
ಆಹಾರ ವಿಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಆಹಾರ ವ್ಯವಸ್ಥೆ ಮಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು,ಮಾ.25:- ಕೊರಾನಾ ಏಫೆಕ್ಟ್ ಹಿನ್ನೆಲೆಯಲ್ಲಿ ಇಡೀ ಭಾರತ ಲಾಕ್ ಡೌನ್ ಆಗಿದ್ದು, ಸಾಂಸ್ಕೃತಿಕ ನಗರಿ ಸಂಪೂರ್ಣ ಸ್ತಬ್ಧಗೊಂಡಿದೆ.
ನಾಲ್ಕನೇ ದಿನವೂ ಲಾಕ್ ಡೌನ್ ಆಗಿದ್ದು, ಲ್ಯಾಕ್ ಡೌನ್ ಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಯುಗಾದಿ ಹಬ್ಬಕ್ಕೆ ಮೆರೆದ ಮಾಜಿ ಶಾಸಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಚಲುವಾಂಬ ಅಸ್ಪತ್ರೆ ಮುಂಭಾಗ ನಿರಾಶ್ರಿತರಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಹಾರ ವಿಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಆಹಾರ ವ್ಯವಸ್ಥೆ ಮಾಡಿದ್ದರು. ಜನ ಸ್ಪಂದನಾ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಗಿದ್ದು, ನೂರಾರು ಜನ ಸರತಿ ಸಾಲಿನಲ್ಲಿ ನಿಂತು ಆಹಾರ ಸ್ವೀಕರಿಸಿದರು. ಜಾಮೂನು,ನೀರಿನ ಬಾಟಲ್,ಆಹಾರ ಪೊಟ್ಟಣ,ಮಾಸ್ಕ್ ವಿತರಿಸಿದರು. (ಕೆ.ಎಸ್,ಎಸ್.ಎಚ್)