ದೇಶವಿದೇಶ

ಅಫ್ಘಾನಿಸ್ಥಾನದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ: 25 ಮಂದಿ ಸಿಖ್ಖರ ಸಾವು

ಕಾಬೂಲ್ (ಮಾ.25): ಬಂದೂಕುಧಾರಿಗಳು ಮತ್ತು ಆತ್ಮಹತ್ಯಾ ಬಾಂಬರ್‍ಗಳು ಅಫ್ಘಾನಿಸ್ತಾನದ ಕಾಬೂಲ್‍ ನಗದಲ್ಲಿರುವ ಸಿಖ್ ಸಮುದಾಯದ ಧಾರ್ಮಿಕ ಸಮುಚ್ಚಯದ ಮೇಲೆ ದಾಳಿ ನಡೆಸಿ, ಹಲವರನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಸಂದರ್ಭದಲ್ಲಿ ಇತರ ನಾಗರಿಕರು ಸಹ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಒಟ್ಟು ಮೃತರ ಸಂಖ್ಯೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.

ಘಟನೆಯಲ್ಲಿ ಕನಿಷ್ಠ 25 ಜನ ಸಾವನ್ನಪ್ಪಿದ್ದಾರೆ. ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಸ್ಥಳೀಯ ಕಾಲಮಾನ 7.45ರ ಹೊತ್ತಿಗೆ ಶೋರ್ ಬಜಾರ್ ಪ್ರದೇಶದಲ್ಲಿ ಇರುವ ಗುರುದ್ವಾರದ ಮೇಲೆ ದಾಳಿ ನಡೆದಿದೆ. ಈ ವೇಳೆ ಕಟ್ಟಡದ ಒಳಗೆ 150 ಭಕ್ತರಿದ್ದರು.

ಆರು ಗಂಟೆಗಳ ಗುಂಡಿನ ದಾಳಿ ನಂತರ ಎಲ್ಲ ನಾಲ್ವರು ಆತ್ಮಹತ್ಯಾ ಬಾಂಬರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ಅಫ್ಘಾನಿಸ್ತಾನದ ವಿಶೇಷ ಪಡೆ ತಿಳಿಸಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಂಬತ್ತು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಅಂದ ಹಾಗೆ, ಐಸಿಸ್ ಉಗ್ರ ಸಂಘಟನೆ ಈ ಹಿಂದೆ ಕೂಡ ಸಿಖ್ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದಲ್ಲಿ ದಾಳಿ ನಡೆಸಿತ್ತು. (ಎನ್.ಬಿ)

Leave a Reply

comments

Related Articles

error: