ಮೈಸೂರು

ಹಳ್ಳಿಗಳನ್ನು ಪ್ರವೇಶಿಸುವುದು ಬೇಡವೆಂದು ತಡೆ ಬೇಲಿ ನಿರ್ಮಿಸಿದ ಸಾತಗಳ್ಳಿ, ಹಂಚ್ಯಾ ಗ್ರಾಮಸ್ಥರು

ಮೈಸೂರು,ಮಾ.26:- ಮೈಸೂರಿನ ಸಾತಗಳ್ಳಿ ಮತ್ತು ಹಂಚ್ಯಾ ಗ್ರಾಮಸ್ಥರು  ನಗರ ಪ್ರದೇಶದ ಜನರು ತಮ್ಮ ಹಳ್ಳಿಗಳನ್ನು ಪ್ರವೇಶಿಸುವುದು ಬೇಡ ಎಂದು ರಸ್ತೆಯಲ್ಲಿಯೇ ತಡೆ ಬೇಲಿ ನಿರ್ಮಿಸಿ ಹಳ್ಳಿಗೆ ಆಗಮಿಸುವ ನಗರಿಗರನ್ನು ಗ್ರಾಮ  ಪ್ರವೇಶಿಸದಂತೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಗ್ರಾಮಸ್ಥರು ನಮ್ಮ ಹಳ್ಳಿಯಿಂದ ಹೊರಗಿರುವ ಯಾವುದೇ ಜನರು ನಮ್ಮ ಊರಿಗೆ ಪ್ರವೇಶಿಸುವುದು ಬೇಡ. ಕೊರೋನಾ ವೈರಸ್ ಎನ್ನುವುದು ಹೋಗುವವರೆಗೂ ನಮ್ಮ ಊರಿಗೆ ಅವರು ಕಾಲಿಡುವುದು ಬೇಡ. ನಮ್ಮ ಊರುಗಳಲ್ಲಿ ಜನತೆ ಕೊರೋನಾ ವೈರಸ್ ಸೋಂಕಿಗೆ ಒಳಗಾಗದೆ ಸದ್ಯ ಆರೋಗ್ಯವಾಗಿದ್ದಾರೆ. ಸರ್ಕಾರ ಕೂಡ ಮನೆಯಲ್ಲಿ ಸುರಕ್ಷಿತವಾಗಿರಿ ಎಂದಿದೆ. ಕಾನೂನನ್ನು ಪಾಲಿಸುವುದು ಮುಖ್ಯ. ಯಾರು ಎಲ್ಲೆಲ್ಲಿ ಇದ್ದಾರೆಯೋ ಅಲ್ಲಿಯೇ ಇರಲಿ, ವೈರಸ್ ಗಳೆಲ್ಲ ಕಡಿಮೆಯಾದ ಮೇಲೆ ನಮ್ಮ ಗ್ರಾಮಕ್ಕೆ ಪ್ರವೇಶ ನೀಡಲಾಗುವುದು ಎಂದರು.

ಒಟ್ಟಿನಲ್ಲಿ ಈ ಕೊರೋನಾ ವೈರಸ್ ಸೋಂಕು ಯಾವ ದೇಶವನ್ನೂ ಬಿಡದೆ ಕಾಡುತ್ತಿದೆ. ಜನತೆ ಈ ಸೋಂಕು ತಮಗೆಲ್ಲಿ ತಗಲುವುದೋ ಎಂಬ ಭೀತಿಯಲ್ಲಿ ನರಳುವಂತೆ ಮಾಡಿದೆ.  ಈಗಾಗಲೇ ವಿಶ್ವಾದ್ಯಂತ 16ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಜನತೆ ಎಚ್ಚೆತ್ತುಕೊಂಡು ಸರ್ಕಾರದ ನಿಯಮವನ್ನು ಅನುಸರಿಸಿ ಮಹಾಮಾರಿಯ ತಡೆಗೆ ಕೈಜೋಡಿಸಲೇ ಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: