ದೇಶವಿದೇಶ

ಕರೋನಾಗೆ ವಿಶ್ವದಲ್ಲಿ 21 ಸಾವಿರ ಜನ ಬಲಿ! 4.7 ಲಕ್ಷ ಜನಕ್ಕೆ ಸೋಂಕು

ಬೆಂಗಳೂರು (ಮಾ.26): ಜಗತ್ತಿನಾದ್ಯಂತ ಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಈವರೆಗೆ 185ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 21 ಸಾವಿರ ಮಂದಿ ಈ ವೈರಾಣುವಿಗೆ ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ಪೀಡಿತರ ಸಂಖ್ಯೆ 4.71 ಲಕ್ಷಕ್ಕೇರಿದೆ.

ಇಷ್ಟೇ ಅಲ್, ಕೊರೋನಾ ಹರಡುವ ಭೀತಿಯಿಂದ ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ಮಂದಿ ಲಾಕ್‍ಡೌನ್ ಸ್ಥಿತಿಯಲ್ಲಿದ್ದಾರೆ. ಇದರಿಂದ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿ ಜನಜೀವನ ಏರುಪೇರಾಗಿದೆ.

ಕೊರೊನಾ ಬಾಧೆಯಿಂದ ತತ್ತರಿಸಿರುವ ಇಟಲಿಯಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಮತ್ತೆ ಸಾವಿನ ಪ್ರಕರಣಗಳು ವರದಿಯಾಗಿವೆ. ಇಟಲಿಯಲ್ಲಿ ಈಗಾಗಲೇ ಸತ್ತವರ ಸಂಖ್ಯೆ 7,000 ದಾಟಿದೆ. ಅಲ್ಲದೇ ಸುಮಾರು 51,000 ಮಂದಿಗೆ ಸೋಂಕು ತಗುಲಿರುವುದು ಕಳವಳಕಾರಿಯಾಗಿದೆ. ಸೋಂಕಿತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಅಮೆರಿಕ ಮತ್ತು ಸ್ಪೇನ್‍ನಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರಿದಿದೆ. ಅಮೆರಿಕದಲ್ಲಿ ಈವರೆಗೆ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50 ಪ್ರಾಂತ್ಯಗಳಲ್ಲಿ ಒಟ್ಟು 50,000ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇರಾನ್, ಪಾಕಿಸ್ತಾನ, ಸ್ಪೇನ್ ಮತ್ತು ಫ್ರಾನ್ಸ್ ದೇಶಗಳಲ್ಲಿಯೂ ಈ ಹೆಮ್ಮಾರಿ ಅಟ್ಟಹಾಸಕ್ಕೆ ಮತ್ತೆ ಸಾವು ನೋವು ಮರುಕಳಿಸಿವೆ.

ಒಟ್ಟು 45 ದೇಶಗಳು ಲಾಕ್‍ಡೌನ್ ಆಗಿವೆ. ಕೋವಿಡ್ 19 ಜಗತ್ತಿನ 185 ದೇಶಗಳಲ್ಲಿ ತನ್ನ ಕಬಂಧ ಬಾಹುಗಳನ್ನು ವ್ಯಾಪಿಸಿದ್ದು ಜಾಗತಿಕ ಪಿಡುಗಾಗಿ ಪರಿಣಮಿಸಿದೆ. (ಎನ್.ಬಿ)

Leave a Reply

comments

Related Articles

error: