
ಕರ್ನಾಟಕಪ್ರಮುಖ ಸುದ್ದಿ
ವೈದ್ಯರು, ನರ್ಸ್, ಆರೋಗ್ಯ ನೌಕರರಿಗೆ ಮನೆ ಖಾಲಿ ಮಾಡಿಸುವಂತಿಲ್ಲ: ಸಿಎಂ ಎಚ್ಚರಿಕೆ
ಬೆಂಗಳೂರು (ಮಾ.26): ವೈದ್ಯರು, ನರ್ಸ್ಗಳು ಸೇರಿದಂತೆ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಯನ್ನು ಮನೆ ಖಾಲಿ ಮಾಡುವಂತೆ ಒತ್ತಾಯಿಸಿದರೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, “ಇದು ಸಾರ್ವಜನಿಕ ಸೇವೆ ಮಾಡುವವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ ಅಪರಾಧವಾಗುತ್ತದೆ. ಮನೆಗಳ ಮಾಲೀಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ” ಎಂದಿದ್ದಾರೆ.
CM of Karnataka @CMofKarnataka
#ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ತಮ್ಮ ಮನೆಗಳನ್ನು ಖಾಲಿ ಮಾಡಲು ಒತ್ತಾಯಿಸುವುದು ಸಾರ್ವಜನಿಕ ಸೇವೆ ಮಾಡುವವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ ಅಪರಾಧವಾಗುತ್ತದೆ. ಮನೆಗಳ ಮಾಲೀಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ಒತ್ತಾಯಿಸುವಂತಿಲ್ಲ. #Covid19India
ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಮನೆ ಮಾಲೀಕರು, ಅಪಾರ್ಟ್ಮೆಂಟ್ಗಲ್ಲಿರುವವರು ಮನೆಗೆ, ಅಪಾರ್ಟ್ಮೆಂಟ್ಗಳಿ ಬಾರದಂತೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರಕಾರ, ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ತಮ್ಮ ಮನೆಗಳನ್ನು ಖಾಲಿ ಮಾಡಲು ಒತ್ತಾಯಿಸುವುದು ಸಾರ್ವಜನಿಕ ಸೇವೆ ಮಾಡುವವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಗಂಭೀರ ಸ್ವರೂಪದ ಅಪರಾಧವಾಗುತ್ತದೆ. ಮನೆಗಳ ಮಾಲೀಕರು ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ಹೇಳುವಂತಿಲ್ಲ ಎಂದು ಸ್ವತಃ ಸಿಎಂ ಟ್ವೀಟ್ ಮಾಡಿದ್ದಾರೆ. (ಎನ್.ಬಿ)