ಮೈಸೂರು

ಆರ್ ಟಿಇ ಅಡಿಯಲ್ಲಿ ದಾಖಲಾತಿ, 7ರಿಂದ 10ನೇ ತರಗತಿಯ ಪರೀಕ್ಷೆ ಪರಿಷ್ಕೃತ ವೇಳಾ ಪಟ್ಟಿ ಏ.20ರ ನಂತರ ಪ್ರಕಟ

ಮೈಸೂರು,ಮಾ.26:- 2019-20ನೇ ಸಾಲಿನ 7ರಿಂದ 10ನೇ ತರಗತಿಯವರೆಗಿನ ಪರೀಕ್ಷೆಗಳು, ಆರ್ ಟಿಇ ಅಡಿಯಲ್ಲಿ ದಾಖಲಾತಿ/2020-21ನೇ ಸಾಲಿನ ದಾಖಲಾತಿಗಳನ್ನು ಮುಂದೂಡಲಾಗಿದ್ದು, ಪರಿಷ್ಕೃತ ವೇಳಾ ಪಟ್ಟಿಯನ್ನು ಏ.20ರ ನಂತರ ಪ್ರಕಟಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ನೋವೆಲ್ ಕೋವಿಡ್-19 ಸೋಂಕು ತಡೆಗಟ್ಟುವಿಕೆಗೆ ಮುಂಜಾಗೃತಾ ಕ್ರಮವಾಗಿ ಉಲ್ಲೇಖ(1)ರ ಸುತ್ತೋಲೆ 14/3/2020ರಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು 31/3/2020ರವರೆಗೆ ಮುಂದೂಡಿ ಪರೀಕ್ಷಾ ಪೂರ್ವ ಸಿದ್ಧತಾ ರಜೆಯನ್ನು ಘೋಷಿಸಲಾಗಿತ್ತು.

ಆದರೆ ರಾಜ್ಯದಲ್ಲಿ ಕೊರೋನಾ ವೈರಸ್ ಹರಡುತ್ತಿರುವುದು ಮುಂದುವರಿಯುತ್ತಿರುವುದರಿಂದ ಹಾಗೂ 15/4/2020ರವರೆಗೆ ಇಡೀ ರಾಷ್ಟ್ರವನ್ನು ಲಾಕ್ ಡೌನ್ ಮಾಡುವಂತೆ ಪ್ರಧಾನಮಂತ್ರಿಗಳು ಘೋಷಿಸಿರುವ ಹಿನ್ನೆಲೆಯಲ್ಲಿ 7ರಿಂದ 9ನೇ ತರಗತಿಯ ಪರೀಕ್ಷೆಗಳು, ಎಸ್ ಎಸ್ ಎಲ್ ಸಿ ಪರೀಕ್ಷೆಗಳು, ಆರ್ ಟಿಇ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಗಳು, ಎಲ್ಲಾ ಪ್ರಕ್ರಿಯೆಗಳ ಪರಿಷ್ಕೃತ ವೇಳಾ ಪಟ್ಟಿಯನ್ನು 20/4/2020ರ ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: