ಮೈಸೂರು

ನೀರಿನ  ಹಾಗೂ ಮನೆ ಕಂದಾಯ ಪಾವತಿಸಲು ಏ.30ರವರೆಗೆ ಕಾಲಾವಕಾಶ ನೀಡಿ : ಶಾಸಕ ರಾಮದಾಸ್

ಮೈಸೂರು,ಮಾ.27:-  ನೀರಿನ  ಹಾಗೂ ಮನೆ ಕಂದಾಯವನ್ನು ಪಾವತಿಸಲು ಮತ್ತು ಅಂಗಡಿ ಪರವಾನಗಿ ನವೀಕರಿಸಲು ಏಪ್ರಿಲ್ 30ರ ವರೆಗೆ ಕಾಲಾವಕಾಶವನ್ನು ನೀಡಬೇಕೆಂದು   ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ರಾಮದಾಸ್ ತಿಳಿಸಿದರು.

ತಮ್ಮ ಕಛೇರಿಯಲ್ಲಿ ನಿನ್ನೆ ಈ ಕುರಿತು ಮಾಹಿತಿ ನೀಡಿದ ಅವರು ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲಕರವಾದ ಕ್ರಮಗಳನ್ನು ಕೈಗೊಳ್ಳುವ ಕುರಿತು ಕೇಳಿಕೊಳ್ಳಲಾಗಿದೆ ಎಂದಿರುವ ಅವರು  ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರವನ್ನು ಮಾಡುವುದರಿಂದ ಜನರು ಮಾರುಕಟ್ಟೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ.  ಆದ್ದರಿಂದ ತಳ್ಳುವ ಗಾಡಿಯ ಮೂಲಕ ಮನೆಮನೆಗಳಿಗೆ ತರಕಾರಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕೆಂದು   ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ .  ಮೆಡಿಕಲ್ ಅಸೋಸಿಯೇಷನ್ ಅವರೊಂದಿಗೆ ಈಗಾಗಲೇ ಮಾತನಾಡಿ ಸಾರ್ವಜನಿಕರಿಗೆ ಬೇಕಾದಂತಹ  ಔಷಧಗಳನ್ನು ಮನೆಮನೆಗಳಿಗೆ ತಲುಪಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ, ಇದಕ್ಕೆ ಸಂಬಂಧಿಸಿದಂತೆ ಪ್ರದೇಶವಾರು ದೂರವಾಣಿ ಸಂಖ್ಯೆಗಳನ್ನು ಇಂದು  ನೀಡುವುದಾಗಿ   ತಿಳಿಸಿದರು.

ರೈಲ್ವೆ ನಿಲ್ದಾಣ ,ಬಸ್ ನಿಲ್ದಾಣ ಮತ್ತು ಮುಂತಾದ ಸ್ಥಳಗಳಲ್ಲಿ ಇದ್ದಂತಹ ಜನರಿಗೆ   ಪುನರ್ವಸತಿ ಕೇಂದ್ರಗಳನ್ನು ನಿರ್ಮಾಣ ಮಾಡಲು   ಮೈಸೂರು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅವರಿಗೂ  ಮತ್ತು ಇದನ್ನು ಕಾರ್ಯಗತಗೊಳಿಸುತ್ತಿರುವ   ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೂ ನನ್ನ ಅಭಿನಂದನೆಗಳು ಎಂದು  ತಿಳಿಸಿದರು.

ಮನೆಯ ಮೇಲ್ಛಾವಣಿಯಲ್ಲಿ ಪಕ್ಷಿಗಳಿಗೆ ನೀರನ್ನು ಇಡಬೇಕಾಗಿ ಸಾರ್ವಜನಿಕರಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು  ಇದೇ ವೇಳೆ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: