ಮೈಸೂರು

ಕಳೆದೆರಡು ತಿಂಗಳ ಹಿಂದೆಯೇ ಯೋಗ ಕಲಿಯಲೆಂದು ಬಂದಿದ್ದ ವಿದೇಶಿ ಪ್ರಜೆಗಳ ಥರ್ಮಲ್ ಸ್ಕ್ರೀನಿಂಗ್ ನಡೆಸಿದ ಜಿಲ್ಲಾಡಳಿತ

ಮೈಸೂರು,ಮಾ.27:- ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಕಳೆದೆರಡು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ವಿದೇಶಿ ಪ್ರಜೆಗಳ ತಪಾಸಣೆಗೆ ಒಳಪಡಿಸಿದೆ.

ನಗರದ ಕಲಾಮಂದಿರದಲ್ಲಿಂದು ವಿದೇಶಿ ಪ್ರಜೆಗಳ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆದಿದೆ. ಮೈಸೂರಿಗೆ, ಯೋಗ ಮತ್ತು ಮೆಡಿಟೇಶನ್ ಗಾಗಿ ಜರ್ಮನ್ ನ 10ಕ್ಕೂ ಅಧಿಕ ಮಂದಿ ಪ್ರಜೆಗಳು ಬಂದಿದ್ದು, ನಗರದ ಗೋಕುಲಂನಲ್ಲಿ ವಾಸವಿದ್ದರು. ಅವರು ಕೊರೋನಾ ವೈರಸ್ ಹರಡುವುದಕ್ಕೂ ಮುನ್ನವೇ ಬಂದಿದ್ದಾರೆ ಎನ್ನಲಾಗಿದ್ದರೂ ಕೂಡ ಮುಜಾಗರೂಕತಾ ಕ್ರಮವಾಗಿ ಅವರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದ್ದು, ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಆದರೆ ಮುಂಜಾಗ್ರಾ ಕ್ರಮವಾಗಿ ವಿದೇಶ ಪ್ರಜೆಗಳನ್ನು ತಪಾಸಣೆ ನಡೆಸುತ್ತಿದ್ದೇವೆ. ಯಾವುದೇ ಭಯ ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: