ಕರ್ನಾಟಕಪ್ರಮುಖ ಸುದ್ದಿ

ಧರ್ಮಸ್ಥಳದಲ್ಲಿ ನಂದಾದೀಪ ನಂದಿ ಹೋದ ವದಂತಿಗೆ ಸ್ಪಷ್ಟನೆ ನೀಡಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ,ಮಾ.27-ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದೇವಸ್ಥಾನದ ನಂದಾದೀಪ ನಂದಿ ಹೋಗಿದೆ ಎಂಬ ವದಂತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿರುವ ವೀರೇಂದ್ರ ಹೆಗ್ಗಡೆಯವರು, ಅಂತಹ ಅಪಪ್ರಚಾರದ ಮಾತುಗಳಿಗೆ ಯಾರೂ ಕಿವಿಕೊಡಬಾರದು ಎಂದು ಮನವಿ ಮಾಡಿದ್ದಾರೆ.

ದೇಗುಲದ ಬಾಗಿಲು ರಾತ್ರಿ 8 ಗಂಟೆಗೆ ಹಾಕಲಾಗುತ್ತದೆ. ಬೆಳಿಗ್ಗೆ ಐದು ಗಂಟೆಗೆ ಬಾಗಿಲು ತೆರೆಯುತ್ತಾರೆ. ಮಧ್ಯದಲ್ಲಿ ಯಾರು ಪ್ರವೇಶ ಮಾಡುವುದಿಲ್ಲ. ನಂತರ ಪ್ರವೇಶ ಮಾಡಿದವರು ಯಾರು? ನಂದಾದೀಪ ನಂದಿ ಹೋಗಿದನ್ನು ನೋಡಿದ್ದು ಯಾರು? ಇದು ಭಕ್ತರ ಭಾವನೆ, ನಂಬಿಕೆ ಜೊತೆ ಕಿಡಿಗೇಡಿಗಳು ಮಾಡಿದ ಸುಳ್ಳು ವದಂತಿಯಾಗಿದೆ ಎಂದಿದ್ದಾರೆ.

ವದಂತಿಯಿಂದ ದೂರ ಇದ್ದು, ಕೋವಿಡ್-19 ದೂರ ಮಾಡಲು ಮನೆಯಲ್ಲಿ ಮಂಜುನಾಥನಿಗೆ ಪ್ರಾರ್ಥನೆ ಮಾಡಿ ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: