ಮೈಸೂರು

ಲಾಕ್ ಡೌನ್ ಹಿನ್ನೆಲೆ : ಮನೆಯಿಂದ ಹೊರಗೆ ಬರದಂತೆ ಕೈಮುಗಿದು ಕೇಳಿಕೊಂಡ ಸಂಚಾರ ಪೊಲೀಸರು

ಮೈಸೂರು,ಮಾ.27:-ಜಗತ್ತಿನಾದ್ಯಂತ ರುದ್ರ ನರ್ತನ ನಡೆಸಿರುವ ಕೊರೋನಾ ಮಹಾಮಾರಿ 16ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ. ಕೊರೋನಾ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಮೈಸೂರಿನಲ್ಲಿಯೂ ಲಾಕ್ ಡೌನ್ ಘೋಷಿಸಲಾಗಿದೆ.

ಮೈಸೂರಿನಲ್ಲಿ ಮೂರು ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾಡಳಿತ ಈಗಾಗಲೇ ಜನತೆಯನ್ನು ಮನೆಯಿಂದ ಹೊರಕ್ಕೆ ಬಾರದಂತೆ ಸೂಚಿಸಿದೆ. ದಯವಿಟ್ಟು ನಿಮ್ಮ ಮನೆಯಲ್ಲೇ ಇರಿ, ಮನೆಯಿಂದ ಹೊರಗೆ ಬರಬೇಡಿ ಎಂದು ಅಧಿಕಾರಿಗಳು ಎಷ್ಟು ಬೇಡಿಕೊಂಡರೂ ಜನತೆ ಕೇಳುತ್ತಿಲ್ಲ. ಜನರು ಮನೆಯಿಂದ ಅನಗತ್ಯ ಹೊರಬರುವುದನ್ನು ತಡೆಯಲು ನಗರಾದ್ಯಂತ ಪೊಲೀಸ್ ಕಾವಲಿದೆ. ಡಿಸಿಪಿ ಡಾ. ಪ್ರಕಾಶ್ ಗೌಡ ನೇತೃತ್ವದಲ್ಲಿ  ನಗರದೆಲ್ಲೆಡೆ ಸಂಚಾರ ಪೊಲೀಸರು ಜಾಗೃತಿ ಮೂಡಿಸುತ್ತಿದ್ದು, ಇಂದು ದೇವರಾಜ ಸಂಚಾರಿ ಠಾಣೆಯ ಪೊಲೀಸರು ಚಿಕ್ಕ ಗಡಿಯಾರದ ಬಳಿ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರಿಗೆ ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ. ಸರ್ಕಾರ ನೀಡಿರುವ ಆದೇಶವನ್ನು ಪಾಲಿಸಿ. ನಿಮ್ಮಿಂದ ನಿಮ್ಮ ಕುಟುಂಬವೂ ಉಳಿಯುವಂತಾಗಲಿ, ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತಿರುವುದು ಕಂಡು ಬಂತು.

ಜನತೆ ಎಲ್ಲಿಯೋ ಸಾವಾದರೆ, ಎಲ್ಲಿಯೋ ಕೊರೋನಾ ಸೋಂಕುಂಟಾದರೆ ತಮಗೇನು ಎಂಬಂತೆ ಉದಾಸೀನ ತೋರಿಸಿ ವಾಹನದಲ್ಲಿ ಸಾಗುತ್ತಿರುವುದು ಕಂಡು ಬಂತು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: