ಮೈಸೂರು

ಆಹಾರದಲ್ಲಿ ಕಲಬೆರಕೆ ಪ್ರಾತ್ಯಕ್ಷಿಕೆ

ಮೈಸೂರು ಗ್ರಾಹಕ ಪರಿಷತ್ ವತಿಯಿಂದ ವಿಶ್ವಗ್ರಾಹಕರ ದಿನಾಚರಣೆಯ ಅಂಗವಾಗಿ ಆಹಾರದಲ್ಲಿ ಕಲಬೆರಕೆ ಪ್ರಾತ್ಯಕ್ಷಿಕೆಯನ್ನು ವಿವಿ ಮೊಹಲ್ಲಾದಲ್ಲಿರುವ ನೃಪತುಂಗ ಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಸೇಂಟ್ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳು ಹಾಗೂ ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ ಸಹಯೋಗದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಬೆಣ್ಣೆ, ತುಪ್ಪ, ಕಾಳುಮೆಣಸು, ಹಾಲು, ಸಾಸಿವೆ ಸೇರಿದಂತೆ ಆಹಾರದಲ್ಲಿ ಯಾವ ರೀತಿ ಕಲಬೆರಕೆ ಮಾಡಿ ವಂಚಿಸುತ್ತಾರೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನಿಂದ ಅಡುಗೆಗೆ ಬಳಸುವ ಎಣ್ಣೆಯ ವರೆಗೂ ಎಲ್ಲವೂ ಕಲಬೆರಕೆಯಾಗಿದ್ದು ಅಡುಗೆ ಪದಾರ್ಥಗಳನ್ನು ಕೊಳ್ಳುವಾಗಿ ಯಾವ ರೀತಿಯ ಮುಂಜಾಗ್ರತ ಕ್ರಮಗಳನ್ನು ವಹಿಸಬೇಕು, ಕಲಬೆರಕೆಯನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಸಿಕೊಟ್ಟರು. ಅಲ್ಲದೆ ಕಲಬೆರಕೆ ಪದಾರ್ಥಗಳನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳನ್ನು ಸಹ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮೈಸೂರು ಗ್ರಾಹಕ ಪರಿಷತ್‍ನ ಕಾರ್ಯದರ್ಶಿ ಡಾ.ಎಂ.ಎಂ ಶಣೈ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: