ಮೈಸೂರು

ರೈತರು ಮಾರಾಟಗಾರರಿಗೆ ಉಪಹಾರದ ವ್ಯವಸ್ಥೆ : ಮಾರಾಟ ಪ್ರದೇಶದಲ್ಲಿ ಫಾಗಿಂಗ್

ಮೈಸೂರು,ಮಾ.28:-  ಮೈಸೂರಿನಲ್ಲಿ ಕೊರೋನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು, ಈ ಹಿನ್ನಲೆಯಲ್ಲಿ ಇಂದು ಎಂ.ಜಿ ರಸ್ತೆಯಲ್ಲಿ  ಸೊಪ್ಪುಮತ್ತು ತರಕಾರಿ  ಮಾರಾಟ ಮಾಡುತ್ತಿದ್ದವರನ್ನು ವಸ್ತು ಪ್ರದರ್ಶನ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಸೂಕ್ತ ವ್ಯವಸ್ಥೆಯ ಹಿತದೃಷ್ಟಿಯಿಂದ ವಸ್ತು ಪ್ರದರ್ಶನದ ತರಕಾರಿ ಮಾರುಕಟ್ಟೆಗೆ  ಶಾಸಕ ಎಸ್. ಎ‌. ರಾಮದಾಸ್ ಅವರ ನೇತೃತ್ವದಲ್ಲಿ ರಚಿಸಿರುವ “ಮೈಸೂರು ಕೋವಿಡ್ ಕೇರ್ ಟೀಂ”    ಭೇಟಿ ನೀಡಿ ಹಾಗೂ ರೈತರು ಹಾಗೂ ಮಾರಾಟಗಾರರಿಗೆ  ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು.

ವಿಶೇಷವಾಗಿ ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾರಾಟ ಪ್ರದೇಶದಲ್ಲಿ ರೋಗನಿರೋಧಕ (ಫಾಗಿಂಗ್)  ಔಷಧಿಯನ್ನು ಸಿಂಪಡಿಸಲು ಚಾಲನೆ ನೀಡಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: