ಮೈಸೂರು

ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದ ಜನತೆ

ಮೈಸೂರು,ಮಾ.29:- ಮೈಸೂರು ಜನರನ್ನು ದೇವರು ಕೂಡ ಕಾಪಾಡೋಕಾಗಲ್ಲ.  ದಿನೇ ದಿನೇ  ಕೊರೋನ ಸೋಂಕು ಹೆಚ್ಚಾಗುತ್ತಿದ್ದರೂ ಜನ ಪಾಠ ಕಲಿಯುತ್ತಿಲ್ಲ. ಅಂತರ ಕಾಯ್ದುಕೊಳ್ಳಬೇಕೆಂದು ಹೇಳಿದ್ದರೂ ಮುಗಿಬೀಳುತ್ತಿರುವುದು ವಿಪರ್ಯಾಸ.

ನಿನ್ನೆ ಒಂದೇ ದಿನ ಮೈಸೂರಿನಲ್ಲಿ 5 ಕೊರೋನಾ  ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮತ್ತೆ 900 ಮಂದಿಗೆ ಸೋಂಕು ಹರಡಿರುವ ಭೀತಿಯಲ್ಲಿ ಅಧಿಕಾರಿಗಳಿದ್ದಾರೆ. ಮಾರುಕಟ್ಟೆ ಶಿಫ್ಟ್ ಆದರೂ  ಜನರಿಗೆ ಶಿಸ್ತು ಮಾತ್ರ ಬರಲಿಲ್ಲ. ಇಂದೂ‌  ಸಹ  ಮುಗಿಬಿದ್ದು  ತರಕಾರಿ ವ್ಯಾಪಾರದಲ್ಲಿ ತೊಡಗಿದ್ದು, ಸ್ಥಳಾಂತರಗೊಂಡ ಜಾಗದಲ್ಲಿ ವ್ಯಾಪಾರ ನಡೆಯುತ್ತಿದೆ. ಅಧಿಕಾರಿಗಳು ಹಾಕಿದ ಮಾರ್ಕಿಂಗ್ ಬಿಟ್ಟು ಉಳಿದೆಲ್ಲ ಜಾಗದಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿದ್ದು,  ಮೈಸೂರು ವಸ್ತುಪ್ರದರ್ಶನ‌ ಆವರಣದ ಮಾರುಕಟ್ಟೆಯಲ್ಲಿ ಕೊರೋನಾ ಸೋಂಕು ಹರಡಬಹುದೆನ್ನುವ ಭೀತಿ ಎದುರಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: