ಮೈಸೂರು

ನಂಜನಗೂಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ  ಹೆಚ್ಚಳ ಹಿನ್ನೆಲೆ : ರಾಸಾಯನಿಕ ಔಷಧಿ ಸಿಂಪಡಣೆ

ಮೈಸೂರು,ಮಾ.30:- ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ‌ ಕೊರೋನಾ ಸೋಂಕಿತ ಪ್ರಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಎಲ್ಲಾ ವಾರ್ಡ್‌ಗಳಿಗೆ ನಗರಸಭೆ ಸಿಬ್ಬಂದಿಗಳು ರಾಸಾಯನಿಕ ಔಷಧಿ ಸಿಂಪಡಿಸುವ ಕಾರ್ಯ ನಡೆಸಿದರು.

ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ  ಹೆಚ್ಚಳವಾದ  ಹಿನ್ನಲೆಯಲ್ಲಿ  ನಗರಸಭೆ ಸಿಬ್ಬಂದಿಗಳು ನಂಜನಗೂಡಿನ ಎಲ್ಲಾ ವಾರ್ಡ್‌ಗಳಿಗೆ ಔಷಧಿ ಸಿಂಪಡಣೆ ಕಾರ್ಯ ಆರಂಭಿಸಿದ್ದು, ಅಗ್ನಿಶಾಮಕ ವಾಹನ ಬಳಸಿ ನಗರಸಭೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.  ಔಷಧಿ ಸಿಂಪಡಣೆ ಹಿನ್ನೆಲೆಯಲ್ಲಿ  ಮನೆಯಿಂದ ಯಾರೂ ಹೊರಬರದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: