ಪ್ರಮುಖ ಸುದ್ದಿಮನರಂಜನೆ

ಸಿಂಪಲ್ ಆಗಿ ನಡೆಯಲಿದೆ ಸ್ಯಾಂಡಲ್​​ವುಡ್​ ಯುವರಾಜ ನಿಖಿಲ್ ಕುಮಾರಸ್ವಾಮಿ ವಿವಾಹ

ರಾಜ್ಯ(ಬೆಂಗಳೂರು)ಮಾ.30:-  ಕೊರೋನಾ ಎಫೆಕ್ಟ್​ ಹಿನ್ನೆಲೆಯಲ್ಲಿ  ಸ್ಯಾಂಡಲ್​​ವುಡ್​ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಸಮಾರಂಭವನ್ನು ಸಿಂಪಲ್ ಆಗಿ ನೆರವೇರಿಸಲು ತೀರ್ಮಾನಿಸಲಾಗಿದೆ

ಫೆಬ್ರವರಿ 10 ರಂದು ನಗರದ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ನಿಖಿಲ್-ರೇವತಿ ಎಂಗೇಜ್​ಮೆಂಟ್​ ಅದ್ಧೂರಿಯಾಗಿ ನಡೆದಿತ್ತು. ಮದುವೆಯನ್ನೂ ಅದಕ್ಕಿಂತ ಗ್ರ್ಯಾಂಡ್​ ಮಾಡುವ ಪ್ಲಾನ್​ನಲ್ಲಿ ದೊಡ್ಮನೆಯವರಿದ್ದರು. ಆದರೆ  ಕೊರೋನಾ ಭೀತಿ ಅವೆಲ್ಲವನ್ನು ಪಕ್ಕಕ್ಕಿಡುವಂತ ಮಾಡಿದೆ. ಹೀಗಾಗಿ ಈ ಸಮಯದಲ್ಲಿ ಆಡಂಬರದ ವಿವಾಹ ಬೇಡ ಎಂದು ನಿಖಿಲ್ ಹಾಗೂ ರೇವತಿ ಮನೆಯವರು ತೀರ್ಮಾನಿಸಿದ್ದಾರೆ. ಹೀಗಾಗಿ ಮಂಡ್ಯ ಬಳಿಯ ಜನಪದ ಲೋಕದಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಗೆ ಈಗ ಬ್ರೇಕ್ ಹಾಕಲಾಗಿದೆ. ಏ. 17 ರಂದು ವಧು ರೇವತಿ ಮನೆಯಲ್ಲಿ ವಿವಾಹ ನಡೆಯಲಿದೆ. ರೇವತಿ ಮನೆಯಿಂದ 20 ಜನ ಹಾಗೂ ನಿಖಿಲ್ ಕುಮಾರಸ್ವಾಮಿ ಮನೆಯಿಂದ 20 ಜನ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ಜನ ಸೇರುವುದು ಬೇಡ ಎಂದು ತಿಳಿಸಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: