ಮೈಸೂರು

ಕೊರೋನಾ ವೈರಸ್ ಸೋಂಕು ಹಿನ್ನೆಲೆ : ಊರಿಗೆ ಬರಬೇಡಿ ಎನ್ನುತ್ತಿದ್ದಾರಂತೆ ನೌಕರರ ಗ್ರಾಮಸ್ಥರು

ಮೈಸೂರು,ಮಾ.30 :- ಕೊರೋನಾ ವೈರಸ್ ಸೋಂಕು ಭಯದ ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ.ಗ್ರೂಪ್ ದರ್ಜೆಯ ನೌಕರರಿಗೆ ಹಳ್ಳಿಯವರು ಮನೆಗೆ ಬರಬೇಡಿ ಎಂದಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿ ಕೊರೋನಾ ವೈರಸ್ ಸೋಂಕಿಗೆ 8ಮಂದಿ ಒಳಗಾಗಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಏತನ್ಮಧ್ಯೆ ಕೆ.ಆರ್.ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಡಿ.ಗ್ರೂಪ್ ನೌಕರರಿಗೆ ಅವರ ಊರಿನವರು ಮನೆಗೆ ಬರಬೇಡಿ  ನಮಗೂ ಆ ಸೋಂಕನ್ನು ಹರಡಬೇಡಿ ಎಂದಿದ್ದಾರೆ ಎನ್ನಲಾಗಿದೆ.

ಈ ಕುರಿತು ಡಿಗ್ರೂಪ್ ನೌಕರರು ಮಾತನಾಡಿದ್ದು, ನಮಗೆ ಊರಿಗೆ ಬರಬೇಡಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಊರಿಗೆ ಬಂದು ನಮಗೆ ವೈರಸ್ ಅಂಟಿಬೇಡಿ. ನೀವು ಅಲ್ಲಿಯೇ ಇರಿ ಇಲ್ಲದಿದ್ದರೆ ಕೆಲಸಕ್ಕೆ ಹೋಗಬೇಡಿ ಎಂದು ಒತ್ತಾಯಿಸುತ್ತಿದ್ದಾರೆ. ನಮಗೆ ಮನೆಯಲ್ಲಿ ಮಕ್ಕಳೆಲ್ಲ ಇದ್ದಾರೆ. ಕೆಲಸಕ್ಕೆ ಬರದೇ ಇರಲು ಸಾಧ್ಯವಿಲ್ಲ. ಕೆಲಸಕ್ಕೆ ಬರದೇ ಎಲ್ಲಿಗೆ ಹೋಗುವುದು. ಊರಿಗೆ ಹೋಗಲು ಈಗ ಊರಿನವರು ಬಿಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: