ಮೈಸೂರು

ಅಸಮರ್ಥ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಸಮರ್ಥ ಅಧಿಕಾರಿಗಳನ್ನು ಮೈಸೂರಿಗೆ ವರ್ಗಾಯಿಸಿ : ಮಾಜಿ ಸಚಿವ ಹೆಚ್. ವಿಶ್ವನಾಥ್ ಮನವಿ

ಮೈಸೂರು,ಮಾ.30:-  ಅಸಮರ್ಥ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಸಮರ್ಥ ಅಧಿಕಾರಿಗಳನ್ನು ಮೈಸೂರಿಗೆ ವರ್ಗಾಯಿಸಿ  ಕೊರೋನಾದಿಂದಾಗಿ ಮೈಸೂರಿನಲ್ಲಿ ಮರಣ ಮೃದಂಗ ಆಗೋದನ್ನು ತಪ್ಪಿಸಿ ಎಂದು  ಮುಖ್ಯಮಂತ್ರಿ  ಬಿ.ಎಸ್‌. ಯಡಿಯೂರಪ್ಪನವರಿಗೆ ಮಾಜಿ ಸಚಿವ ಹೆಚ್. ವಿಶ್ವನಾಥ್ ಮನವಿ ಮಾಡಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡ  ಅವರು ಮೈಸೂರಿನಲ್ಲಿ ಕೊರೋನಾ ನರ್ತನ ಮಾಡುತ್ತಿದೆ. ಪಕ್ಕದ ನಂಜನಗೂಡಿನಲ್ಲಿ ಕೊರೋನಾದಿಂದಾಗಿ ನರಕ ಸದೃಶ್ಯ ಉಂಟಾಗಿದೆ. ಆದರೆ ಕೆಲವು ಇಲಾಖೆ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲವೇನೋ ಅಂತ ಕುಳಿತಿದ್ದಾರೆ. ಕೆಲ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮೈಸೂರು ಕೊರೋನಾ ಸಾವಿನ ಸಂಖ್ಯೆಯಲ್ಲೂ ಮುಂಚೂಣಿಯಲ್ಲಿ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದ ಅವರು ಈ ಕೂಡಲೇ  ಅಸಮರ್ಥರನ್ನು ವರ್ಗಾವಣೆ ಮಾಡಿ. ಸಮರ್ಥ ಅಧಿಕಾರಿಗಳನ್ನು ಮೈಸೂರಿಗೆ ನೇಮಿಸಿ ಒಂದು ತಂಡ ರಚಿಸಿ. ಆ ಮೂಲಕ ಕೊರೋನಾ ಮಹಾಮಾರಿಯನ್ನು ಹಿಡಿತಕ್ಕೆ ತನ್ನಿ ಎಂದಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: